ಹೈದರಾಬಾದ್, ಜೂನ್ ೧೩,ಇ ಎಸ್ ಐ ಹಗರಣಕ್ಕೆ ಸಂಬಂಧಿಸಿದಂತೆ ತೆಲುದೇಶಂ ಪಕ್ಷದ ಮಾಜಿ ಸಚಿವ ಅಚ್ಚನ್ನ ನಾಯ್ಡು ಬಂಧಿಸಿದ ದಿನದ ನಂತರ ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಬಿಎಸ್- ೪ ವಾಹನಗಳ ಹೆಸರಿನಲ್ಲಿ ಬಿಎಸ್ -೩ ವಾಹನಗಳ ಮಾರಾಟ ಮಾಡಿದ ಆರೋಪದ ಮೇಲೆ ಶನಿವಾರ. ಪಕ್ಷದ ಹಿರಿಯ ನಾಯಕ ಜೆಸಿ ಪ್ರಭಾಕರ ರೆಡ್ಡಿ ಹಾಗೂ ಅವರ ಪುತ್ರ ಅಶ್ಮಿತ್ ರೆಡ್ಡಿ ಅವರನ್ನು ಬಂಜಾರ ಹಿಲ್ಸ್ ನಿವಾಸದಲ್ಲಿ ಬಂಧಿಸಿದ್ದಾರೆ. ಪ್ರಭಾಕರ ರೆಡ್ಡಿ, ಅವರ ಪುತ್ರನನ್ನು ಬಂಧಿಸಿದ ನಂತರ ಪೊಲೀಸರು ಮುಂದಿನ ಕ್ರಮಕ್ಕಾಗಿ ಅವರನ್ನು ಅನಂತಪುರಕ್ಕೆ ಕರೆದೊಯ್ಯಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಎಸ್ -೩ ವಾಹನಗಳನ್ನು ಬಿಎಸ್ -೪ ವಾಹನಗಳೆಂದು ಮಾರಾಟ ಮಾಡಿದ್ದ ಆರೋಪದ ಮೇಲೆ ಟಿಡಿಪಿ ನಾಯಕನನ್ನು ಬಂಧಿಸಲಾಗಿದೆ. ಸುಮಾರು ೧೫೪ ವಾಹನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿಸಲಾಗಿದೆ ಎಂದು ದೂರಲಾಗಿದೆ.ದಾಖಲೆಗಳನ್ನು ತಿರುಚಿದ ಹಾಗೂ ವಾಹನಗಳ ನೋಂದಣಿ ನಿಯಮಗಳನ್ನು ಬದಲಿಸಿದ ಆರೋಪಗಳನ್ನು ಸಹ ಹೊರಿಸಲಾಗಿದೆ.ಅನಂತಪುರದಲ್ಲಿ ಎಲ್ಲ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡನಂತರ ಪ್ರಭಾಕರ ರೆಡ್ಡಿ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆಪ್ರಭಾಕರ್ ರೆಡ್ಡಿ ಹಿರಿಯ ಟಿಡಿಪಿ ನಾಯಕ ಹಾಗೂ ಮಾಜಿ ಸಂಸದ ಜೆ.ಸಿ. ದಿವಾಕರ್ ರೆಡ್ಡಿ ಕಿರಿಯ ಸಹೋದರನಾಗಿದ್ದು, ಈ ಇಬ್ಬರೂ ಸಹೋದರರು ತಮ್ಮ ಕುಟುಂಬದೊಂದಿಗೆ ಜೆಸಿ ಟ್ರಾವಲ್ಸ್ ಎಂಬ ಕಂಪನಿ ನಡೆಸುತ್ತಿದ್ದಾರೆ.ಪ್ರಭಾಕರ ರೆಡ್ಡಿ ಹಾಗೂ ಆತನ ಪುತ್ರನ ಬಂಧನದ ನಂತರ ಆಂಧ್ರ ಪ್ರದೇಶದಾದ್ಯಂತ ಟಿಡಿಪಿ ಕಾರ್ಯಕರ್ತರು ಹಾಗೂ ನಾಯಕರಲ್ಲಿ ದಿಗ್ಬ್ರಮೆಗೊಳಗಾಗಿದ್ದಾರೆ.