ನೂತನ ಮೋಟಾರ್ ವಾಹನ ಕಾಯ್ದೆ ಜಾರಿಯಿಂದಲೂ ಅಪಘಾತ ಕಡಿಮೆಯಾಗಿಲ್ಲ; ಗಡ್ಕರಿ

Gadkari

ನವದೆಹಲಿ, ಡಿ 2 - ನೂತನ ಮೋಟಾರ್ ವಾಹನ ಕಾಯ್ದೆ ಜಾರಿಗೆ ತಂದರೂ ರಸ್ತೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯ ಮುಂದೆ ಒಪ್ಪಿಕೊಂಡಿದೆ.

  ನೂತನ ಮೋಟಾರ್ ವಾಹನ ಕಾಯ್ದೆ ಜಾರಿಯಿಂದಲೂ ಅಪಘಾತ ಕಡಿಮೆಯಾಗಿಲ್ಲ; ಗಡ್ಕರಿಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಅಪಘಾತ ವಲಯಗಳಲ್ಲಿ ಅತಿ ಹೆಚ್ಚು ಅಪಘಾತಗಳಾಗುತ್ತಿವೆ. ಅಂತಹ ಸ್ಥಳಗಳ ವಿನ್ಯಾಸವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ.ಮೌಲ್ಯದ ಎರಡು ಯೋಜನೆಗಳನ್ನು ಅನುಮೋದನೆಗಾಗಿ ವಿಶ್ವ ಬ್ಯಾಂಕ್ ಗೆ ಕಳುಹಿಸಿದೆ ಎಂದರು. 

  ಜನರಿಗೆ ಶಾಲೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಇತರ ವಿಧಾನಗಳ ಮೂಲಕ ಕಠಿಣ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

  ತಮಿಳುನಾಡಿನಲ್ಲಿ ಶೇ. 29ರಂದು ರಸ್ತೆ ಅಪಘಾತಗಳು ಕಡಿಮೆಯಾಗಿವೆ. ಇತರ ರಾಜ್ಯಗಳಿಗೆ ಕೂಡ ಇದೇ ಮಾದರಿಯಲ್ಲಿ ಕೆಲಸ ನಿರ್ವಹಿಸುವಂತೆ ಪತ್ರ ಬರೆಯಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡುವ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

  ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮುಂಬೈ-ಗೋವಾ ಹೆದ್ದಾರಿ ಮುಂದಿನ ಒಂದು ತಿಂಗಳಲ್ಲಿ ಸಿದ್ಧವಾಗಲಿದೆ. ಪ್ರತಿ ದಿನ ಎರಡು ಕಿಲೋಮೀಟರ್ ನಂತೆ ನಿರ್ಮಾಣವಾಗುತ್ತಿದ್ದ ಚತುಷ್ಪದ ರಸ್ತೆ ನಿರ್ಮಾಣ ಕಾಮಗಾರಿ ದಿನಕ್ಕೆ 30 ಕಿಮೀಗೆ ಹೆಚ್ಚಳವಾಗಿದೆ ಎಂದರು. 

  ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ 26 ಯೋಜನೆಗಳಲ್ಲಿ ಸಮಸ್ಯೆಗಳಿದ್ದು. ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ದೇಶಾದ್ಯಂತ 50 ಸಾವಿರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ದ್ವಾರಕ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಿಸಲಾಗುತ್ತಿದ್ದು, ಇದರಿಂದ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದರು.