ನೆರೆ ಪರಿಹಾರ ಕಾರ್ಯ ಚುರುಕುಗೊಳಿಸಿ: ಸಚಿವ ಪಾಟೀಲ

ಗದಗ : ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ನರಗುಂದದಲ್ಲಿ ಗದಗ ಜಿಲ್ಲೆ ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಒದಗಿಸಲಾಗುತ್ತಿರುವ ಪರಿಹಾರ ಕಾರ್ಯಗಳ ಪರಿಶೀಲನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿದರು. ಜಿಲ್ಲೆಯ ನರಗುಂದ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳ ನೆರೆಹಾನಿಗೊಳಗಾದ ಗ್ರಾಮಗಳಲ್ಲಿ ಆದ ಹಾನಿಯ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.  

ಸಂತ್ರಸ್ತರ ಮನೆ, ಬೆಳೆ, ಜಾನುವಾರು ಹಾನಿ ಕುರಿತಂತೆ ರಾಜ್ಯ ಸರ್ಕಾರವು ವಿಪತ್ತು ನಿರ್ವಹಣೆ ನಿಯಮಗಳಿಗಿಂತ ಹೆಚ್ಚಿನ ಪರಿಹಾರ ಘೋಷಿಸಿದೆ. ಅಧಿಕಾರಿಗಳು ಅರ್ಹ  ಫಲಾನಿಭವಿಗಳಿಗೆ ವಿಳಂಬವಿಲ್ಲದೇ ಸರ್ಕಾರ ಘೋಷಿಸಿರುವ ಪರಿಹಾರ ವಿತರಿಸಲು ಚುರುಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಪೂರ್ಣ ಹಾನಿಯಾಗಿರುವ ಶಾಲಾ ಕೊಠಡಿಗಳಿಗೆ ತಕ್ಷಣ ತಾತ್ಕಾಲಿಕ ಶೆಡ್ ಗಳನ್ನು ನಿಮರ್ಿಸಬೇಕು. ಇತರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಕುರಿತು ವಾಸ್ತವ ಸಮೀಕ್ಷೆ ಜೊತೆಗೆ ಅದರ ಪುನರನಿಮರ್ಾಣದ ಅಂದಾಜು ವೆಚ್ಚ ಸೇರಿದ ಪ್ರಸ್ತಾವನೆಯನ್ನು ವಿಳಂಬ ವಿಲ್ಲದೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸಚಿವ ಸಿ.ಸಿ.ಪಾಟೀಲ ನಿದರ್ೆಶನ ನೀಡಿದರು.                          

     ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲೆಯ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಇದುವರೆಗೆ ನೀಡಲಾದ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರ. ಗದಗ ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.