ಬೆಂಗಳೂರು, ಮೇ 25,ದಿನಕ್ಕೆ ಅರಣ್ಯ ತಂಡವೊಂದಕ್ಕೆ ರೂ 10 ಸಾವಿರ ಹಣವನ್ನೂ ವ್ಯಯಿಸಲಾಗುತ್ತಿದೆ. ಒಟ್ಟಾರೆಯಾಗಿ ದಿನಕ್ಕೆ ರೂ.3 ಲಕ್ಷದಷ್ಟು ಮೊತ್ತ. ಗಿಡಗಳನ್ನು ನೆಡುವುದು, ಅಪಾಯ ತಂದಿಡಬಲ್ಲ ಮರಗಳನ್ನು ತೆರವುಗೊಳಿಸಲು ಈ ಅನುದಾನ ಬಳಸಲಾಗುತ್ತಿದೆ. ಆದರೆ ಈ ತಂಡಗಳನ್ನು ಬಿಬಿಎಂಪಿ ಸಮರ್ಪಕವಾಗಿ ಬಳಸದೆ ನಿರ್ಲಕ್ಷ್ಯ ತೋರಿದೆ ಎಂದು ಆಪ್ ಆದ್ಮಿ ಪಕ್ಷ (ಆಪ್)ಟೀಕಿಸಿದೆ.ಬಿಬಿಎಂಪಿಯಲ್ಲಿ ಅರಣ್ಯ ವಿಭಾಗ 2006 ರಲ್ಲಿ ಆರಂಭವಾಗಿದ್ದು ಪ್ರತಿ ವರ್ಷ ಸರಾಸರಿ ರೂ.ಆ 10ರಿಂದ 12 ಕೋಟಿಗಳನ್ನು ಅರಣ್ಯ ವಿಭಾಗಕ್ಕೆ ಮೀಸಲಿಡಲಾಗುತ್ತಿದೆ.
ಬಿಬಿಎಂಪಿ ಅಧಿಕಾರಿಗಳು ದುರ್ಬಲ ಮರಗಳ ತೆರವಿಗೆ ಪರಿಸರವಾದಿಗಳ ವಿರೋಧವಿದೆ ಎಂದು ಸಮಜಾಯಿಷಿ ನೀಡಿ ತಮ್ಮ ಕರ್ತವ್ಯದಿಂದ ಜಾರಿಕೊಳ್ಳುತ್ತಿದ್ದಾರೆ. ಬೇರುಗಳು ದುರ್ಬಲಗೊಂಡು ಅಪಾಯವನ್ನು ತಂದೊಡ್ಡಬಲ್ಲ ಮರಗಳನ್ನು ತೆರವು ಮಾಡಲು ಯಾರ ವಿರೋಧವೂ ಇಲ್ಲ ಎಂದಿದೆ.
ಬೆಂಗಳೂರು ನಗರ ಘಟಕ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳು ದುರ್ಬಲ ಮರಗಳ ತೆರವಿಗೆ ಪರಿಸರವಾದಿಗಳ ವಿರೋಧವಿದೆ ಎಂದು ಸಮಜಾಯಿಷಿ ನೀಡಿ ತಮ್ಮ ಕರ್ತವ್ಯದಿಂದ ಜಾರಿಕೊಳ್ಳುತ್ತಿದ್ದಾರೆ. ಬೇರುಗಳು ದುರ್ಬಲಗೊಂಡು ಅಪಾಯವನ್ನು ತಂದೊಡ್ಡಬಲ್ಲ ಮರಗಳನ್ನು ತೆರವು ಮಾಡಲು ಯಾರ ವಿರೋಧವೂ ಇಲ್ಲ. ದುರ್ಬಲ ಮರಗಳ ತೆರವಿಗೆ ಬಿಬಿಎಂಪಿ ವಿವೇಚಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಮರಗಳ ಸಮೀಕ್ಷೆ ನಡೆಸಿ ತೆರವುಗೊಳಿಸಲು ಇರುವ ಕಾರಣಗಳನ್ನು ತಜ್ಞರು ಮತ್ತು ವಾರ್ಡ್ ಸಮಿತಿಗೆ ಸ್ಪಷ್ಟಪಡಿಸಬೇಕಿತ್ತು. ಕಡಿಯುತ್ತಿರುವ ಮರಕ್ಕೆ ಇರುವ ಸಮಸ್ಯೆಗಳನ್ನು ಸ್ಥಳೀಯರಿಗೆ ಸ್ಪಷ್ಟಪಡಿಸುವ ಜವಾಬ್ದಾರಿ ಪಾಲಿಕೆಯದ್ದು. ಹೀಗೆ ಮಾಡಿದ್ದಲ್ಲಿ ಸಾರ್ವಜನಿಕರು ವಿರೋಧ ಮಾಡುತ್ತಿರಲಿಲ್ಲ. ಅದಾವುದನ್ನೂ ಮಾಡದೆ ಪಿಳ್ಳೆ ನೆವ ಹೂಡಿ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವ ಅಧಿಕಾರಿಗಳಿಗೆ ಛೀಮಾರಿ ಹಾಕಬೇಕಿದೆ. ಇವರ ಬೇಜವಾಬ್ದಾರಿ ನಡೆಯಿಂದಾಗಿ ಇಂದು ಪ್ರಾಣ ಹಾನಿಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.