ಅಮೆರಿಕದಲ್ಲಿ ಸತತ ಎರಡನೇ ದಿನ ಕೊರೊನಾ ಸೋಂಕಿಗೆ ಸುಮಾರು 2 ಸಾವಿರ ಜನರ ಸಾವು

ವಾಷಿಂಗ್ಟನ್, ಏ 9, ಅಮೆರಿಕದಲ್ಲಿ ಸತತ ಎರಡನೇ ದಿನ ಕೊರೊನಾ ವೈರಾಣು ಸೋಂಕಿಗೆ ಸುಮಾರು ಎರಡು ಸಾವಿರ ಜನರು ಬಲಿಯಾಗಿದ್ದಾರೆ.ಅಮೆರಿಕದಲ್ಲಿ ಈ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 14739 ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1973 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು ಬುಧವಾರ 1939 ಜನರು ಈ ಸೋಂಕು ತಗುಲಿ ಸಾವನ್ನಪ್ಪಿದ್ದರು. ಇದೀಗ ಸ್ಪೇನ್ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದ ಜನರು ಈ ಸೋಂಕಿಗೆ ಬಲಿಯಾಗಿದ್ದು ಇಟಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ.ಅಮೆರಿಕದಲ್ಲಿ ಈ ಸೋಂಕಿಗೆ 4,29,052 ಜನರು ತುತ್ತಾಗಿದ್ದು ಇತರ ರಾಷ್ಟ್ರಗಳಿಗಿಂತ ಸೋಂಕಿತರ ಸಂಖ್ಯೆ ಅಮೆರಿಕದಲ್ಲಿ ಅತಿ ಹೆಚ್ಚಿದೆ.23,707 ಜನರು ಈ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದೂ ವರದಿ ತಿಳಿಸಿದೆ.