370 ರದ್ದು; ಅರ್ಜಿದಾರರ ಮೇಲೆ ಸುಪ್ರೀಂ ಕೋರ್ಟ್ ಅಸಮಾಧಾನ

ನವದೆಹಲಿ, ಆಗಸ್ಟ್, 16       ಜಮ್ಮು ಕಾಶ್ಮೀರದಲ್ಲಿ ವಿಶೇಷಾಧಿಕಾರ ಕಲ್ಪಿಸಿರುವ ಸಂವಿಧಾನದ  370 ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್  ವಿಚಾರಣೆ ನಡೆಸಿತು,   

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅರ್ಜಿದಾರರು,  ತಮ್ಮ ಅರ್ಜಿಯಲ್ಲಿ ಉದ್ದೇಶವನ್ನೇ ನಮೂದಿಸಿಲ್ಲ  ಎಂದು   ಅಸಮಾಧಾನ ವ್ಯಕ್ತಪಡಿಸಿದರು.   

 ಯಾವ ರೀತಿಯ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಜಿದಾರ ವಕೀಲ ಎಂ.ಎಲ್.ಶರ್ಮಾ ಅವರನ್ನು ಪ್ರಶ್ನಿಸಿದರು.  ಅರ್ಧ ಘಂಟೆ ಕಾಲ  ಓದಿದರೂ ....   ಪ್ರಕರಣದ ಮುಖ್ಯ ಉದ್ದೇಶ ಅರ್ಥವಾಗಲಿಲ್ಲ. ಒಂದೊಮ್ಮೆ ಅಜರ್ಿಯನ್ನು ವಜಾಗೊಳಿಸಿದರೆ,  ಎಲ್ಲಾ ಐದು  ಅರ್ಜಿಗಳ  ಮೇಲೆ ಪರಿಣಾಮ ಬೀರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಂವಿಧಾನ ವಿಧಿ 370 ರದ್ದು ವಿಷಯಕ್ಕೆ ಸಂಬಂಧಿಸಿದಂತೆ  ಒಟ್ಟು 7 ಅರ್ಜಿಗಳನ್ನು ಸಲ್ಲಿಸಲಾಗಿದೆ.  ಈ ಪೈಕಿ ನಾಲ್ಕು ಅರ್ಜಿಗಳಲ್ಲಿ ಲೋಪಗಳಿವೆ. ಅರ್ಜಿಯಲ್ಲಿ ತಮಗೆ ಏನು ಬೇಕು? ಎಂಬ ಸ್ಪಷ್ಟವಾಗಿ  ನಮೋದಿಸದೆ ಹೇಗೆ ಅರ್ಜ ಸಲ್ಲಿಸುತ್ತೀರಿ ಎಂದು  ಮುಖ್ಯ ನ್ಯಾಯಮೂರ್ತಿ ಕೋಪಗೊಂಡರು. ಅಜರ್ಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ವಕೀಲ ಶರ್ಮಾ  ನ್ಯಾಯ ಪೀಠವನ್ನು ಕೋರಿದರು. 

ಕಾಶ್ಮೀರದಲ್ಲಿ ಮಾಧ್ಯಮ ಮತ್ತು ಸಂವಹನ ವ್ಯವಸ್ಥೆಯ ಮೇಲೆ  ವಿಧಿಸಿರುವ ನಿರ್ಬಂಧಗಳನ್ನು  ಪ್ರಶ್ನಿಸಿ  ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಅನುರಾಧಾ ಬೇಸಿನ್  ಅವರು ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿಯ ಬಗ್ಗೆ  ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್ಎ ಬೊಬ್ಡೆ ,   ಸ್ಥಿರ ದೂರವಾಣಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ಅಂಶವನ್ನು  ಇಂದು ಬೆಳಿಗ್ಗೆ ಕಾಶ್ಮೀರ ಹೈಕೋರ್ಟ್ನ್ ಮುಖ್ಯ ನ್ಯಾಯಮೂರ್ತಿ ಜೊತೆ ಮಾತುಕತೆ ನಡೆಸಿದಾಗ ಈ ವಿಷಯ ನ್ಯಾಯಾಲಯದ ಗಮನಕ್ಕೆ  ಬಂದಿದೆ ಎಂದರು.  

 ಕಾಶ್ಮೀರದಲ್ಲಿ  ಪರಿಸ್ಥಿತಿ  ಕ್ರಮೇಣ ಸುಧಾರಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.  ನಿಯಮಿತವಾಗಿ  ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ,  ಹಂತ ಹಂತವಾಗಿ ನಿರ್ಬಂಧ ಕ್ರಮಗಳನ್ನು  ತೆರವುಗೊಳಿಸಲಾಗುವುದು  ಎಂದು ನ್ಯಾಯ ಪೀಠಕ್ಕೆ ವಿವರಿಸಿದರು. ಆದರೆ ಪ್ರಕರಣದ ಮುಂದಿನ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿಲ್ಲ.