ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ರಚನೆ
ಕೊಪ್ಪಳ 09: ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ ಗುರುವಾರ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದ 2025-26 ರಿಂದ 2029-30ನೇ ಸಾಲಿನ ವರೆಗೆ 5 ವರ್ಷದ ಅವಧಿಗೆ ಚುನಾವಣೆ ನಡೆಸಲಾಗಿದ್ದು, ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ರಚನೆಯಾಗಿದೆ.
ಚುನಾವಣೆ ಅಧಿಕಾರಿಯಾಗಿ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಚುನಾವಣೆ ಪ್ರಕ್ರಿಯೆ ಕೈಗೊಂಡರು. ಈ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಕುಷ್ಟಗಿ ತಾಲ್ಲೂಕಿನ ಗುಮಗೇರ ಗ್ರಾಮದ ಶೇಖರಗೌಡ ವಿರುಪಾಕ್ಷಗೌಡ ಮಾಲಿಪಾಟೀಲ, ಜಿಲ್ಲಾ ಉಪಾಧ್ಯಕ್ಷರಾಗಿ ಕನಕಗಿರಿಯ ಸಂಗಪ್ಪ ತಂದೆ ಹಂಪಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕಾರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮದ ಎಂ.ಚಂದ್ರಶೇಖರಗೌಡ ತಂದೆ ಅಯ್ಯನಗೌಡ, ಖಜಾಂಚಿಯಾಗಿ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದ ಅಮರೇಶಪ್ಪ ತಂದೆ ಶಿವಪ್ಪ ಗೋನಾಳ ಹಾಗೂ ರಾಜ್ಯ ಪ್ರತಿನಿಧಿಯಗಿ ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಶಿವಪ್ಪ ಗೂಳರಡ್ಡಿ ಮೂಲಿಮನಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.