ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿ‌ದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ

Abakari dali at karwar

ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿ‌ದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ

ಕಾರವಾರ.ಸೆ.೫ ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿ‌ದಾಳಿ ಇಂದು ಶನಿವಾರ ನಡೆದಿದೆ.‌ ಅಬಕಾರಿ‌ ಇನ್ಸುಸಪೆಕ್ಟರ್ ಸುವರ್ಣಾ  ಬಿ.ನಾಯ್ಕ  ಹಾಗೂ ಅವರ ತಂಡ ದಾಳಿ ಮಾಡಿತು.   ಆರೋಪಿತರಾದ ಸಮೀರ ಮಾಳ್ಸೇಕರ್ ,ವಿನಯ ಪಡುವಳಕರ,   ರಮಾಕಾಂತ ಮಾಳ್ಸೇಸೇಕರ್‌ ಪರಾರಿಯಾದರು . ಮದ್ಯ ಬಿಟ್ಟು ಪರಾರಿಯಾಗಿದ್ದು, ಅವರು ಬಿಟ್ಟು ಹೋದ ಗೋವಾ ಮದ್ಯ- ೧.೭೧ ಲಕ್ಷ ರೂ.ಗಳದ್ದು ಎಂದು ಅಬಕಾರಿ ಇನ್ಸ್ಪೆಕ್ಟರ್ ಸುವರ್ಣ ನಾಯ್ಕ ತಿಳಿಸಿದ್ದಾರೆ. ಕಾಡಿನಲ್ಲಿನತಲೆಯ ಮೇಲೆ ಮದ್ಯ ಹೊತ್ತು ಹೋಟೆಗಾಳಿ ಗ್ರಾಮಕ್ಕೆ ತರುತ್ತಿದ್ದರು.‌ಗೋವಾದಿಂದ ಅಕ್ರಮವಾಗಿ ಮದ್ಯ ತರುತ್ತಿದ್ದಾರೆಂಬ ಖಚುತ ಮಾಹಿತಿ ಅಬಕಾರಿ ಕಾರವಾರ ವಲಯದ ಅಧಿಕಾರಿಗಳಿಗೆ ಸಿಕ್ಕ ಕಾರಣ , ಅರಣ್ಯದ ಮರ ಗಿಡಗಳ ಮಧ್ಯೆ ಅಡಗಿ ಕುಳಿತು ಅಧಿಕಾರಿಗಳು ದಾಳಿ ಮಾಡಿದರು.‌ಹವ್ಯಾಸಿ ಮದ್ಯ ಅಕ್ರಮ ಸಾಗಾಟದಾರರು ಅಧಿಕಾರಿಗಳ ಕಂಡು ತಲೆ ಹೊರೆ ಬಿಸಾಡಿ ಕಾಡಲ್ಲಿ ಪರಾರಿಯಾಗಿದ್ದಾರೆ. ಹವ್ಯಾಸಿಮದ್ಯ ಸಾಗಾಟದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.