ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ: ಶ್ರದ್ಧೆ ಭಕ್ತಿಯಿಂದ ಮಾವಿನ ಹಣ್ಣಿನ ಉತ್ಸವ

ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ:  ಶ್ರದ್ಧೆ ಭಕ್ತಿಯಿಂದ ಮಾವಿನ ಹಣ್ಣಿನ ಉತ್ಸವ Abhishekam of mango juice to Maha Ganapati: Mango festival celebrated with devotion

 ಕಾರವಾರ 12: ನಗರದ ಹಬ್ಬುವಾಡ ಮಹಾದೇವ ದೇವಸ್ಥಾನದಲ್ಲಿ ಮಂಗಳವಾರ ಮಾವಿನ ಹಣ್ಣಿನ ಉತ್ಸವ ಶ್ರದ್ಧೆ, ಭಕ್ತಿಯಿಂದ ನೆರವೇರಿತು.  ಭಕ್ತಾದಿಗಳು 1 ಕ್ವಿಂಟಾಲ್‌ಗೂ ಅಧಿಕ ಮಾವಿನ ಹಣ್ಣನ್ನು ತಂದು ಮಹಾದೇವ ದೇವರಿಗೆ ಅರ​‍್ಿಸಿದ್ದರು. ಇದೇ ವೇಳೆ ದೇವಸ್ಥಾನದಲ್ಲಿರುವ ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ ಮಾಡಲಾಯಿತು. ಪ್ರಸಾದವಾಗಿ ಮಾವಿನ ಹಣ್ಣು, ಮಾವಿನ ಹಣ್ಣಿನ ರಸಾಯನ ಹಾಗೂ ಮಾವಿನ ಕಾಯಿ ಚಿತ್ರಾನ್ನ ನೀಡಲಾಗಿತ್ತು. ದೇವರಿಗೆ ಹೂವಿಗಿಂತ ಹೆಜ್ಜಾಗಿ ಮಾವಿನ ಎಲೆ ಹಾಗೂ ಹಣ್ಣಿನಿಂದಲೇ ಅಲಂಕಾರ ಮನಮೋಹಕವಾಗಿತ್ತು. ರಾತ್ರಿ ಮಾವಿನ ಹಣ್ಣುಗಳನ್ನು ಹರಾಜು ಹಾಕಲಾಯಿತು.  ಬಾಡ ಗ್ರಾಮದ ಮಹಾದೇವ ವಿನಾಯಕ ಟ್ರಸ್ಟ್‌ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು ಹಾಗೂ ಎಲ್ಲ ಭಕ್ತಾದಿಗಳ ಸಹಕಾರದಿಂದ ಉತ್ಸವ ಯಶಸ್ವಿಯಾಯಿತು.