ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ: ಶ್ರದ್ಧೆ ಭಕ್ತಿಯಿಂದ ಮಾವಿನ ಹಣ್ಣಿನ ಉತ್ಸವ
Abhishekam of mango juice to Maha Ganapati: Mango festival celebrated with devotion
ಕಾರವಾರ 12: ನಗರದ ಹಬ್ಬುವಾಡ ಮಹಾದೇವ ದೇವಸ್ಥಾನದಲ್ಲಿ ಮಂಗಳವಾರ ಮಾವಿನ ಹಣ್ಣಿನ ಉತ್ಸವ ಶ್ರದ್ಧೆ, ಭಕ್ತಿಯಿಂದ ನೆರವೇರಿತು. ಭಕ್ತಾದಿಗಳು 1 ಕ್ವಿಂಟಾಲ್ಗೂ ಅಧಿಕ ಮಾವಿನ ಹಣ್ಣನ್ನು ತಂದು ಮಹಾದೇವ ದೇವರಿಗೆ ಅರ್ಿಸಿದ್ದರು. ಇದೇ ವೇಳೆ ದೇವಸ್ಥಾನದಲ್ಲಿರುವ ಮಹಾಗಣಪತಿಗೆ ಮಾವಿನ ಹಣ್ಣಿನ ರಸದ ಅಭಿಷೇಕ ಮಾಡಲಾಯಿತು. ಪ್ರಸಾದವಾಗಿ ಮಾವಿನ ಹಣ್ಣು, ಮಾವಿನ ಹಣ್ಣಿನ ರಸಾಯನ ಹಾಗೂ ಮಾವಿನ ಕಾಯಿ ಚಿತ್ರಾನ್ನ ನೀಡಲಾಗಿತ್ತು. ದೇವರಿಗೆ ಹೂವಿಗಿಂತ ಹೆಜ್ಜಾಗಿ ಮಾವಿನ ಎಲೆ ಹಾಗೂ ಹಣ್ಣಿನಿಂದಲೇ ಅಲಂಕಾರ ಮನಮೋಹಕವಾಗಿತ್ತು. ರಾತ್ರಿ ಮಾವಿನ ಹಣ್ಣುಗಳನ್ನು ಹರಾಜು ಹಾಕಲಾಯಿತು. ಬಾಡ ಗ್ರಾಮದ ಮಹಾದೇವ ವಿನಾಯಕ ಟ್ರಸ್ಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು ಹಾಗೂ ಎಲ್ಲ ಭಕ್ತಾದಿಗಳ ಸಹಕಾರದಿಂದ ಉತ್ಸವ ಯಶಸ್ವಿಯಾಯಿತು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 