ಗುಲ್ಶನ್ ಕುಮಾರ್ ಆಗಿ ಅಮೀರ್ ಖಾನ್

ಮುಂಬೈ, ಸೆ 10    ಬಾಲಿವುಡ್ ಮಿಸ್ಟರ್ ಪಫರ್ೆಕ್ಷನಿಸ್ಟ್ ಅಮೀರ್ ಖಾನ್,  ಸಂಗೀತ ಕಂಪನಿ 'ಟಿ-ಸೀರೀಸ್' ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಜೀವನ ಚರಿತ್ರೆಯಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. 

2018 ರಿಂದ, ಗುಲ್ಶನ್ ಕುಮಾರ್ ಅವರ ಜೀವನ ಚರಿತ್ರೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಹಿಂದೆ ಅಮೀರ್ ಖಾನ್ ಈ ಚಿತ್ರದಲ್ಲಿ ನಟಿಸಲು ಒಪ್ಪಿ ನಂತರ ನಿರಾಕರಿಸಿದರು. ಈಗ ಮತ್ತೊಮ್ಮೆ ಚಿತ್ರಕ್ಕೆ ಸಮ್ಮತಿ ಸೂಚಿಸುವ ಮೂಲಕ ಗುಲ್ಶನ್ ಕುಮಾರ್ ಆಗಲು ಒಪ್ಪಿಕೊಂಡಿದ್ದಾರೆ. 

ಈ ಹಿಂದೆ ಗುಲ್ಷನ್ ಕುಮಾರ್ ಜೀವನಧಾರಿತ ಚಿತ್ರದಲ್ಲಿ ನಟಿಸಲು ಯಾಕೆ ನಿರಾಕರಿಸಿದ್ದೀರಿ ಎಂದು ಅಮೀರ್ ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, "ಕಿರಣ್ ಮತ್ತು ನಾನು 'ಮೊಗಲ್' ಚಿತ್ರ ನಿಮರ್ಿಸುತ್ತಿದ್ದು, ಮುಖ್ಯ ಪಾತ್ರದಲ್ಲಿ ನಾನು ನಟಿಸುತ್ತಿದ್ದೆ. ಆಗ ಚಿತ್ರ ನಿರ್ದೇಶಕ ಸುಭಾಷ್ ಕಪೂರ್ ವಿರುದ್ಧ ಕೇಸು ಚಾಲ್ತಿಯಲ್ಲಿದೆ ಎಂಬ ವಿಷಯ ನಮಗೆ ತಿಳಿದಿರಲಿಲ್ಲ. ನನ್ನ ಪ್ರಕಾರ, ಆ ಪ್ರಕರಣವು 5-6 ವರ್ಷಗಳು ಹಿಂದೆ ದಾಖಲಾಗಿತ್ತು. ಆದರೆ, ಕಳೆದ ವರ್ಷ ಮೀಟೂ ಅಭಿಯಾನ ಪ್ರಾರಂಭವಾದಾಗ, ಆ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿತು. ನಂತರ ನಾವಿಬ್ಬರೂ ಸಾಕಷ್ಟು ತೊಂದರೆಗೀಡಾಗಿದ್ದೇವು.  ಒಂದು ವಾರದವೆರೆಗೆ ಏನು ಮಾಡಬೇಕು ಎಂಬುದೇ ಕಿರಣ್ ಮತ್ತು ನನಗೆ ಅರ್ಥವಾಗಲಿಲ್ಲ ಎಂದರು. 

ನನ್ನಿಂದಾಗಿ ಇನ್ನೊಬ್ಬರ ಕೆಲಸ ಅಪಾಯದಲ್ಲಿತ್ತು. ಆ ಸಂದರ್ಭದಲ್ಲಿ ನನಗೆ ನಿದ್ದೆ ಮಾಡುವುದು ಕಷ್ಟವಾಗಿತ್ತು. ನಂತರ ಕಿರಣ್ ಜೊತೆಗೂಡಿ ಕಳೆದ 5-6 ವರ್ಷಗಳಲ್ಲಿ ಸುಭಾಷ್ ಅವರೊಂದಿಗೆ ಕೆಲಸ ಮಾಡಿದ ಎಲ್ಲಾ ಮಹಿಳೆಯರೊಂದಿಗೆ ಮಾತನಾಡಬೇಕೆಂದು ನಿರ್ಧರಿಸಿದೇವು. ಆದರೆ, ಸುಭಾಷ್ ಬಗ್ಗೆ ಯಾವುದೇ ಮಹಿಳೆ ಕೆಟ್ಟದಾಗಿ ಮಾತಾಡಲಿಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ ಅವರೆಲ್ಲರೂ ಕೆಲಸ ಮಾಡುವಾಗ ಸುಭಾಷ್ ಎಲ್ಲರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು ಎಂದರು. ಈ ಪ್ರಕರಣದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ, ಇದರಿಂದ ಯಾರೂ ತಪ್ಪಿತಸ್ಥರೆಂದು ಹೇಳಲು ಸಾಧ್ಯದಿಲ್ಲ. ನಾವು ಸಾಕಷ್ಟು ಯೋಚಿಸಿ ಸುಭಾಷ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು  ತಿಳಿಸಿದ್ದಾರೆ.