ಎಟಿಪಿ ಫೈನಲ್ಸ್ : ಫೆಡರರ್ ಗೆ ಸೋಲು, ಜೊಕೊವಿಚ್ಗೆ ಗೆಲುವು

 ಲಂಡನ್, ನ 11 :         ಆರು ಬಾರಿ ಚಾಂಪಿಯನ್ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಎಟಿಪಿ ವಿಶ್ವ ಟೂರ್ ಫೈನಲ್ಸ್ ನ ಮೊದಲ ಪಂದ್ಯದಲ್ಲಿ ಡೋಮಿನಿಚ್ ಥೀಮ್ ವಿರುದ್ಧ ನೇರ ಸೆಟ್ಗಳಲ್ಲಿ ಸೋಲು ಅನುಭವಿಸಿದರು. ಮತ್ತೊಂದು ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಅವರು ಇಟಲಿಯ ಮ್ಯಾಟ್ಟೊ ಬೆರರ್ೆಟ್ಟಿನಿ ವಿರುದ್ಧ ಗೆದ್ದು ಶುಭಾರಂಭ ಮಾಡಿದರು. ಭಾನುವಾರ ನಡೆದ ಮೊದಲ ಗೇಮ್ಲ್ಲಿ ಎಡವಿದ ಫೆಡರರ್, 5-7, 5-7 ನೇರ ಸೆಟ್ಗಳಿಂದ ಆಸ್ಟ್ರೀಯಾದ ಥೀಮ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು.  38ರ ಪ್ರಾಯದ ಸ್ವಿಸ್ ಆಟಗಾರ ಮೊದಲನೇ ಗೇಮ್ ಸೋಲು ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡು 5-5 ಸಮಬಲ ಸಾಧಿಸಿದ್ದರು. ಈ ವೇಳೆ ಥೀಮ್ ಅವರ ಹಿಂಬದಿ ಹೊಡೆತಗಳನ್ನು ಎದುರಿಸುವಲ್ಲಿ ಫೆಡರರ್ ವಿಫಲರಾದರು. ಇದರ ಪರಿಣಾಮ ಆಸ್ಟ್ರೀಯಾ ಆಟಗಾರ 11 ಮತ್ತು 12 ಗೇಮ್ ಗಳಲ್ಲಿ ಗೆದ್ದು ಮೊದಲನೇ ಸೆಟ್ ಅನ್ನು 7-5 ಅಂತರದಲ್ಲಿ ತನ್ನದಾಗಿಸಿಕೊಂಡರು. ಎರಡನೇ ಸೆಟ್ನಲ್ಲಿ ಫೆಡರರ್ ಹಾಗೂ ಥೀಮ್ ನಡುವೆ ಸಮಬಲ ಹೋರಾಟ ನಡೆಯುತ್ತಿತ್ತು. ಆದರೆ, 11ನೇ ಗೇಮ್ ನಲ್ಲಿ ಥೀಮ್ ಗೆಲ್ಲುವ ಮೂಲಕ ಒಂದು ಅಂಕ ಮುನ್ನಡೆ ಸಾಧಿಸಿ ಅಂತಿಮವಾಗಿ ಎರಡನೇ ಸೆಟ್ ಅನ್ನು 7-5 ಅಂತರದಲ್ಲಿ ಗೆದ್ದರು. ಇದಕ್ಕೂ ಮುನ್ನ ನಡೆದ ಮತ್ತೊಂದು ಸಿಂಗಲ್ಸ್ ಹಣಾಹಣಿಯಲ್ಲಿ ಸರ್ಭಿಯಾದ ನೊವಾಕ್ ಜೊಕೊವಿಚ್ ಅವರು ಇಟಲಿಯ ಮ್ಯಾಟ್ಟಿ ಬೆರರ್ೆಟ್ಟಿನಿ ವಿರುದ್ಧ 6-2, 6-1 ಅಂತರದಲ್ಲಿ ಗೆಲುವಿನ ನಗೆ ಬೀರಿದರು.