ಎಟಿಪಿ ಕಪ್ ಡ್ರಾ ಪ್ರಕಟ : ಸಿಡ್ನಿಗೆ ಫೆಡರರ್, ಪರ್ತ್ಗೆ ನಡಾಲ್

ಲಂಡನ್, ಸೆ 16    ವೃತ್ತಿಪರ ಟೆನಿಸ್ ಅಸೋಸಿಯೇಷನ್ 2020ರ ಆವೃತ್ತಿಯ ಎಟಿಪಿ ಕಪ್ ಟೂರ್ನಿ ಡ್ರಾ ಪ್ರಕಟಿಸಲಾಗಿದ್ದು ಸಿಡ್ನಿಯಲ್ಲಿ ಸ್ವಿಜರ್ಲೆಂಡ್ನ ರೋಜರ್ ಫೆಡೆರರ್, ಪರ್ತೆನ್ಲ್ಲಿ ಸ್ಪೇನ್ನ ರಫೆಲ್ ನಡಾಲ್ ಹಾಗೂ ಬ್ರಿಸ್ಬೇನ್ನಲ್ಲಿ  ಸಬರ್ಿಯಾದ ನೊವಾಕ್ ಜೊಕೊವಿಚ್ ಅವರು ಸೆಣಸಲಿದ್ದಾರೆ. 

ಮುಂದಿನ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯಾ ಓಪನ್ ತಯಾರಿಗೆ ಜನವರಿ 3 ರಿಂದ 12ರವರೆಗೆ ನಡೆಯುವ ಎಟಿಪಿ ಕಪ್ ಸೂಕ್ತ ವೇದಿಕೆಯಾಗಲಿದೆ. ಸಿಡ್ನಿ, ಪರ್ತ್ ಹಾಗೂ ಬ್ರಿಸ್ಬೇನ್ನಲ್ಲಿ ಒಟ್ಟು ಆರು ಗುಂಪುಗಳಲ್ಲಿ 24 ದೇಶದ ಆಟಗಾರರು ಎಟಿಪಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.  

ಕಳೆದ ಎರಡು ದಿನಗಳ ಹಿಂದೆಯಷ್ಟೆ ಆಸ್ಟ್ರೇಲಿಯಾದಲ್ಲಿ ನಡೆಯುವ ಎಟಿಪಿ ಕಪ್ ಟೂರ್ನಿಯಲ್ಲಿ ವಿಶ್ವದ ಅಗ್ರ 30 ಶ್ರೇಯಾಂಕದ ಆಟಗಾರು ಭಾಗವಹಿಸಲಿದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದರು.  

  ಸಬರ್ಿಯಾದ ನೊವಾಕ್ ಜೊಕೊವಿಚ್ ಅವರು ಬ್ರಿಸ್ಬೇನ್ನ 'ಎ' ಗುಂಪಿನಲ್ಲಿ ಫ್ರಾನ್ಸ್, ದಕ್ಷಿಣ ಆಫ್ರಿಕಾ, ಜರ್ಮನಿ, ಗ್ರೀಸ್, ಕೆನಡಾ ಹಾಗೂ ವೈಲ್ಡ್ಕಾಡರ್್ ಆಸ್ಟ್ರೇಲಿಯಾದೊಂದಿಗೆ ಸ್ಥಾನ ಪಡೆದಿದ್ದಾರೆ. ಸ್ಪೇನ್ನ ರಫೆಲ್ ನಡಾಲ್ ಅವರು ಪತರ್್ "ಬಿ" ಗುಂಪಿನಲ್ಲಿ ಜಪಾನ್, ಜಾಜರ್ಿಯಾ,ರಷ್ಯಾ, ಇಟಲಿ ಅಮೆರಿಕಾದೊಂದಿಗೆ ಆಡಲಿದ್ದಾರೆ. 

 ಗುಂಪು 'ಎ' (ಬ್ರಿಸ್ಬೇನ್)-ಸಬರ್ಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಟಿಬಿಎ 

ಗುಂಪು'ಬಿ' (ಪತರ್್)- ಸ್ಪೇನ್, ಜಪಾನ್, ಜಾಜರ್ಿಯಾ, ಟಿಬಿಎ 

ಗುಂಪು 'ಸಿ' ಸಿಡ್ನಿ)- ಸ್ವಿಜರ್ಲೆಂಡ್, ಬೆಲ್ಜಿಯಂ, ಬ್ರಿಟನ್, ಟಿಬಿಎ 

ಗುಂಪು 'ಡಿ' (ಪತರ್್)- ರಷ್ಯಾ ಇಟಲಿ, ಯುಎಸ್ಎ, ಟಿಬಿಎ 

ಗುಂಪು 'ಇ' (ಸಿಡ್ನಿ)- ಆಸ್ಟ್ರೀಯಾ, ಕ್ರೋವೇಷ್ಯಾ, ಅಜರ್ೆಂಟೀನಾ, ಟಿಬಿಎ 

ಗುಂಪು 'ಎಫ್' (ಬ್ರಿಸ್ಬೇನ್)- ಜರ್ಮನಿ, ಗ್ರೀಸ್, ಕೆನಡಾ, ಟಿಬಿಎ 

ಈ ಮೇಲೆ ಸೂಚಿಸಿರುವ ರಾಷ್ಟ್ರಗಳ ಅಗ್ರ ಇಬ್ಬರು ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 24 ದೇಶಗಳಿಂದ ಒಟ್ಟು 100 ಆಟಗಾರರು ಪಾಲ್ಗೊಳ್ಳಲಿದ್ದು, 15 ದಶಲಕ್ಷ ಬಹುಮಾನ ಹಾಗೂ 750 ಎಟಿಪಿ ಶ್ರೇಯಾಂಕ ಅಂಕಗಳನ್ನು ನೀಡಲಾಗುವುದು.