ನವದೆಹಲಿ, ಸೆ 14 ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂನರ್ಿಯ ಪುರುಷರ ಸೆಮಿಫೈನಲ್ಗೆ ಪ್ರವೇಶ ಮಾಡಿದ್ದಾರೆ. 88 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಪಾರಮ್ಯೆ ಮೆರೆಡ ಪ್ರಜ್ಞೇಶ್ ಗುಣೇಶ್ವರನ್ 6-4, 6-4 ನೇರ ಸೆಟ್ಗಳ ಅಂತರದಲ್ಲಿ ಜಪಾನ್ನ ಹಿರೋಕಿ ಮೊರಿಯಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಚೆನ್ನೈ ಆಟಗಾರ ಎಂಟು ಏಸ್ ಅಂಕಗಳೊಂದಿಗೆ ಎರಡು ಬಾರಿ ಡಬಲ್ಸ್ ಫಾಲ್ಟ್ ಮಾಡಿದರೆ, ಎದುರಾಳಿ ಆಟಗಾರ ಮೊರಿಯಾ ಅವರು ಐದು ಏಸ್ ಅಂಕಗಳನ್ನು ಗೆದ್ದು ಒಂದೇ-ಒಂದು ಡಬಲ್ಸ್ ಫಾಲ್ಟ್ ಮಾಡಿದರು. ಸೆಮಿಫೈನಲ್ ಹಣಾಹಣಿಯಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನ್ನ ಯಸುತಕಾ ಉಚಿಯಾಮಾ ವಿರುದ್ಧ ಪ್ರಜ್ಞೇಶ್ ಸೆಣಸಲಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸಾಕೇತ್ ಮೈನೇನಿ ಹಾಗೂ ಡಿವಿಜ್ ಶರಣ್ ಜೋಡಿಯು ಮಾರ್ಕ್ ಪೋಲ್ಮನ್ಸ್ ಮತ್ತು ಸ್ಕೂಟ್ ಪುಡ್ಜಿಯುನಾಸ್ ಆಸ್ಟ್ರೇಲಿಯಾ ಜೋಡಿಯ ವಿರುದ್ಧ 6-2, 3-6, 13-11 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿತು. ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾಕೇತ್ ಹಾಗೂ ಡಿವಿಜ್ ಶರಣ್ ಜೋಡಿಯು ಮೊದಲ ಸವರ್ಿಸ್ನಲ್ಲಿ ಶೇ. 80 ರಷ್ಟು ಯಶ ಕಂಡಿತು. ಆದರೆ, ಕಳೆದ ಪಂದ್ಯಗಳ ರೀತಿ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ ಜೋಡಿಯನ್ನು ನಿಯಂತ್ರಿಸಿ ಪಂದ್ಯ ಗೆಲ್ಲುವಲ್ಲಿ ಭಾರತದ ಜೋಡಿ ವೈಫಲ್ಯ ಅನುಭವಿಸಿತು. ಅಂತಿಮವಾಗಿ ಸೋತು ಟೂರ್ನಿಯಿಂದ ಹೊರ ನಡೆಯಿತು. ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಎನ್. ಶ್ರೀರಾಮ್ ಬಾಲಾಜಿ ಹಾಗೂ ವಿಷ್ಣು ವರ್ಧನ್ ಭಾರತದ ಜೋಡಿಯು ಪೋರ್ಚುಗಲ್ನ ಗೊನ್ಕಾಲೊ ಒಲಿವೆರಾ ಮತ್ತು ಜಪಾನ್ನ ಯಸುತಕಾ ಉಚಿಯಾಮಾ ಜೋಡಿಯ ವಿರುದ್ಧ 7-6 (1), 6-3 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿತು.