ನವದೆಹಲಿ, ಸೆ 14 ಗೆಲುವಿನ ಲಯ ಮುಂದುವರಿಸಿರುವ ಆರನೇ ಶ್ರೇಯಾಂಕ ಭಾರತದ ಆಟಗಾರ ಸುಮಿತ್ ನಗಾಲ್ ಬಂಜಾ ಲುಕಾ (ಬೋಸ್ನಿಯಾ ಮತ್ತು ಹಜರ್ೆಗೋವಿನಾ)ದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂನರ್ಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸುಮಿತ್ ನಗಾಲ್ 6-2, 7-5 ನೇರ ಸೆಟ್ಗಳ ಅಂತರದಲ್ಲಿ ಅಜರ್ೆಂಟೀನಾದ ಫೆಡೆರಿಕೊ ಕೊರಿಯಾ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ಇತ್ತೀಚಿಗಷ್ಟೆ ಯುಎಸ್ ಓಪನ್ ಚೊಚ್ಚಲ ಪ್ರವೇಶ ಮಾಡಿದ್ದ ಭಾರತದ ಆಟಗಾರ ರೋಜರ್ ಫೆಡರರ್ ವಿರುದ್ಧ ಮೊದಲ ಸೆಟ್ ಗೆದ್ದು ನಂತರ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು. ಇದೇ ವಿಶ್ವಾಸದಲ್ಲಿರುವ ಹರಿಯಾಣದ ಸುಮಿತ್ ನಗಾಲ್ ಸೆಮಿಫೈನಲ್ ಕಾದಾಟದಲ್ಲಿ ಐದನೇ ಶ್ರೇಯಾಂಕದ ಸ್ಲೋವಾಕಿಯಾದ ಫಿಲಿಪ್ ಹೊರಾಸ್ಕಿ ವಿರುದ್ಧ ಸೆಣಸಲಿದ್ದಾರೆ. ಇಸ್ತಾನ್ಬುಲ್ನಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ರಾಮ್ಕುಮಾರ್ ರಾಮನಾಥನ್ ಹಾಗೂ ಫ್ರಾನ್ಸ್ನ ಹುಗ್ಯೂ ಗ್ರೇನಿಯರ್ ಜೋಡಿಯು ಆ್ಯಂಡ್ರಿ ಗೊಲುಬೆವ್ ಹಾಗೂ ಅಲೆಕ್ಸಾಂಡರ್ ನೆಡೊವೆಸೋವ್ ಜೋಡಿಯ ವಿರುದ್ಧ 6-4, 6-2 ನೇರ ಸೆಟ್ಗಳ ಅಂತರದಲ್ಲಿ ಸುಲಭವಾಗಿ ಶರಣಾಯಿತು.