ಬಳ್ಳಾರಿ:ಮಾ(19)ರಂದು ನಗರದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ವತಿಯಿಂದ , "ಆಶಾ ಆಗ್ರಹ" ಎಂಬ ಆಗ್ರಹದ ಮೆರವಣಿಗೆ ನಡೆಯಿತು.
ನಗರದ ಗಾಂಧಿಭವನ ದಿಂದ ಆರಂಭಗೊಂಡ ಆಗ್ರಹದ ಮೆರವಣಿಗೆ ಡಿಸಿ ಕಚೇರಿಗೆ ತೆರಳಿ ಮುಖ್ಯ ಮತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮನವರೇ ತಾವೇ ಘೋಷಿಸಿದ ಭರವಸೆಯಂತೆ, ಎಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ಹತ್ತು ಸಾವಿರ ರೂ ಗಳ ಗೌರವಧನವನ್ನು ನೀಡಲಾಗುವುದು ಎಂದು ಹೇಳಿದ್ದಿರಿ. ರೂ.10,000 ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಸಹ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ದೊರೆಯುವುದು ಗ್ಯಾರಂಟಿ ಎಂಬಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಿರಿ. ಆದರೆ ಆಗಿಲ್ಲ. ನಿಮ್ಮ ಭರವಸೆ ಈಡೇರಿಸಬೇಕು ಎಂದರು.
ಆಯವ್ಯಯದಲ್ಲಿ ರಾಜ್ಯದ ಸುಮಾರು 2,50,000 ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೂ ರೂ. 1000 ಹೆಚ್ಚಿಸಿ. ಇದೇ ಬಜೆಟ್ ನಲ್ಲಿ ಸೇರಿಸಿ, ಆದೇಶಿಸಬೇಕು.ಕೂಡಲೇ ಆರೋಗ್ಯ ಸಚಿವರ ಸಮ್ಮುಖದಲ್ಲಿ ಇಲಾಖೆಯಿಂದ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ, ಸುಗಮಕಾರರನ್ನು ಮತ್ತು 60 ವರ್ಷ ಆದ ಆಶಾ ಕಾರ್ಯಕರ್ತೆಯರನ್ನು ಕೆಲಸವನ್ನು ಕೊನೆಗಾಣಿಸಿರುವುದನ್ನು ಹಿಂತೆಗೆದುಕೊಂಡು ಇನ್ನುಳಿದ ಬಹುದಿನಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಗೀತಾ, ಸಬೀನಾ, ಎಐಟಿಯುಸಿನ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮತ್ತು ಎ.ಶಾಂತಾ ಆಶಾ ಕಾರ್ಯಕರ್ತರು ಸದಸ್ಯರು ಇತರರು ಭಾಗವಹಿಸಿದ್ದರು.