ಬೆಳಗಾವಿ, ಜುಲೈ 10: ನಗರದಲ್ಲಿ ಆಶಾ ಕಾರ್ಯಕತರ್ೆಯರು ಶುಕ್ರವಾರ ಸೇವಾ ಭದ್ರತೆ, ಅಗತ್ಯ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿಯೊಂದನ್ನು ಸಲ್ಲಿಸಿದರು.
ಶುಕ್ರವಾರ ನಗರದ ಚನ್ನಮ್ಮ ವೃತ್ದಲ್ಲಿ ಕೊರೊನಾ ಕೆಲಸಕ್ಕೆ ಗೈರಾಗುವ ಮೂಲಕ ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಸೇವಾ ಭದ್ರತೆ, ಅಗತ್ಯ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಸಕರ್ಾರವನ್ನು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಾಯಿತು.
ಇದೇ ವೇಳೆಯಲ್ಲಿ ಆಶಾ ಕಾರ್ಯಕತರ್ೆಯೊಬ್ಬರು ಮಾತನಾಡಿ, ನಮಗೆ ಸುರಕ್ಷಿತ ಸಾಧನಗಳಿಲ್ಲ. ಆದರೆ ಕೊರೋನಾ ಸೋಂಕು ತಡೆ ಕಾಯರ್ಾಚರಣೆಯಲ್ಲಿ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ. ವೇತನ, ಸೌಲಭ್ಯ ಯಾವುದೂ ಇಲ್ಲ. ಸಕರ್ಾರ ಕೂಡಲೇ ಕ್ರಮ ಕೈಗೊಂಡು ಆಶಾ ಕಾರ್ಯಕತರ್ೆಯರ ನೆರವಿಗೆ ಬರಬೇಕು. ಅಲ್ಲಿಯವರೆಗೂ ಕರ್ತವ್ಯಕ್ಕೆ ಹಾಜರಾಗದಿರಲು ಎಲ್ಲ ಆಶಾ ಕಾರ್ಯಕತರ್ೆಯರು ನಿರ್ಧರಿಸಿದ್ದಾರೆಂದು ತಿಳಿಸಿದರು. ಇಂದಿನ ಈ ಪ್ರತಿಭಟನೆಯಲ್ಲಿ ಹಲವಾರು ಆಶಾ ಕಾರ್ಯಕತರ್ೆಯರು ಭಾಗವಹಿಸಿದ್ದರು.