ಮೇರಿ ಕೋಮ್, ಅಮಿತ್ ಪಂಗಾಲ್ ಮೇಲೆ ಎಲ್ಲರ ಕಣ್ಣು

ನವದೆಹಲಿ, ಮಾ.7,ಆರು ಬಾರಿ ವಿಶ್ವ ಚಾಂಪಿಯನ್ಶಿಪ್ ಎಂ.ಸಿ. ಮೇರಿ ಕೋಮ್ (51 ಕೆಜಿ) ಮತ್ತು ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ವಿಜೇತ ಅಮಿತ್ ಪಂಗಾಲ್ ಅವರು ಶನಿವಾರ ಏಷ್ಯಾ / ಓಷಿಯಾನಿಯಾ ಒಲಿಂಪಿಕ್ ಕ್ವಾಲಿಫೈಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಅಖಾಡಕ್ಕೆ ಇಳಿಯಲಿದ್ದು, ಒಲಿಂಪಿಕ್ಸ್ ಟಿಕೆಟ್ ಪಡೆಯುವ ಅಭಿಯಾನವನ್ನು ಆರಂಭಿಸಲಿದ್ದಾರೆ. ಟೂರ್ನಮೆಂಟ್ ಡ್ರಾ ಪ್ರಕಾರ, ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಮತ್ತು ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಗಾಲ್ (52 ಕೆಜಿ) ತಮ್ಮ ಮೊದಲ ಎರಡು ಪಂದ್ಯಗಳ ಗೆಲುವು ಸಾಧಿಸಿದರೆ, ಸೆಮಿಫೈನಲ್ಸ್ ತಲುಪಿ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲಿದ್ದಾರೆ. ಪಂಗಾಲ್ ಅವರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದರೆ, ಮೇರಿ ಕೋಮ್ ಎರಡನೇ ಶ್ರೇಯಾಂಕ ಪಡೆದಿದ್ದಾರೆ.ಮೇರಿ ಕೋಮ್ ಮೊದಲ ಸುತ್ತಿನಲ್ಲಿ ನ್ಯೂಜಿಲೆಂಡ್ನ ಟ್ಯಾಸ್ಮಿನ್ ಬೈನಿ ಅವರನ್ನು ಎದುರಿಸಲಿದ್ದಾರೆ. ಪಂಗಲ್, ಮಂಗೋಲಿಯಾದ ಅಂಕಮ್ನಾಡಾಕ್ ಖಾರ್ಖು ಅವರನ್ನು ಎದುರಿಸಲಿದ್ದಾರೆ. ಪಂಗಾಲ್ ಮೊದಲ ಸುತ್ತಿನಲ್ಲಿ ಬೈ ಪಡೆದರು ಮತ್ತು ಮಂಗೋಲಿಯನ್ ಬಾಕ್ಸರ್ ವಿರುದ್ಧ ಏಕಮಾತ್ರ ದಾಖಲೆಯನ್ನು ಹೊಂದಿದ್ದಾರೆ.