ಯುಜಿಸಿಯು ಶಿಫಾರಸ್ಸುಗಳನ್ನು ತಕ್ಷಣವೇ ಹಿಂಪಡೆಯಲು ಎಐಡಿಎಸ್‌ಓ ಒತ್ತಾಯ

AIDSO demands immediate withdrawal of UGC recommendations

ಬಳ್ಳಾರಿ 06: ಪದವಿ ಹಾಗು ಸ್ನಾತಕೋತ್ತರದಲ್ಲಿ ದ್ವಿ ವಾರ್ಷಿಕ ಪ್ರವೇಶವನ್ನು ಅನುಮತಿಸುವ ಯುಜಿಸಿಯ ನಿರ್ದೇಶನಗಳು, ಬಹು ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಿರುವುದು, ಎರಡು ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಮುಂದುವರಿಸಲು ಅನುಮತಿ ನೀಡುವಂತಹ ಇತರ ಕ್ರಮಗಳು ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಅಂತ್ಯ ಹಾಡಿದಂತಾಗುತ್ತದೆ! ಓಇಕ-2020 ರ ಭಾಗವಾಗಿರುವ ಈ ನೀತಿಗಳು ದೇಶದಲ್ಲಿ ಈಗ ಉಳಿದಿರುವ ಗುಣಮಟ್ಟದ ಶಿಕ್ಷಣವನ್ನು ಸಹ ನಾಶಪಡಿಸುವಂತಹದಾಗಿದೆ.  

ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಹಲವು ಕಾರ್ಯಕ್ರಮಗಳನ್ನು ಮುಂದುವರಿಸಲು ಅನುಮತಿ ನೀಡಿದರೆ, ಅವರು ಯಾವುದೇ ರೀತಿಯ ಸಮಗ್ರ ಕಲಿಕೆಯನ್ನು ಪದವಿ ಶಿಕ್ಷಣದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಉನ್ನತ ಕಲಿಕೆಗೆ ಇರುವ ಮಾರ್ಗವನ್ನು ನಾಶಪಡಿಸುತ್ತದೆ. ಬಹು ಪ್ರವೇಶ ಮತ್ತು ನಿರ್ಗಮನದ ಆಯ್ಕೆಯು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಉಳಿಯುವುದನ್ನು ಕಾನೂನುಬದ್ಧಗೊಳಿಸುವಿಕೆ ಹೊರತು ಬೇರೇನೂ ಅಲ್ಲ! ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಯು ಯಾವುದೇ ವಿಭಾಗದಲ್ಲಿ ಓದಿದ್ದರು ಸಹ ಅದನ್ನು ಲೆಕ್ಕಿಸದೆಯೇ, ಅವರು ಒಂದು ಪ್ರವೇಶ ಪರೀಕ್ಷೆಯನ್ನು ಬರೆಯುವ ಮೂಲಕ ಪದವಿ / ಸ್ನಾತಕ ಪದವಿಯಲ್ಲಿ ಯಾವುದೇ ವಿಭಾಗದಲ್ಲಿ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಯುಜಿಸಿ ನಿಯಮವು ತಿಳಿಸಿದೆ.  

ಅಂದರೆ ಕಲಾ ವಿಭಾಗದ ವಿದ್ಯಾರ್ಥಿಯೂ ಸಹ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಬಹುದು! ಹೀಗಾದಲ್ಲಿ ಅವರಿಗೆ ಯಾವ ರೀತಿಯ ಜ್ಞಾನವನ್ನು ನೀಡಲಾಗುತ್ತದೆ!? ಆ ವಿದ್ಯಾರ್ಥಿಯು ಯಾವುದೇ ವಿಭಾಗದಲ್ಲಿಯಾದರೂ ಸಹ ಆಳವಾದ ಕಲಿಕೆಯನ್ನು ಪಡೆಯಲು ಸಾಧ್ಯವಿದೆಯೇ? ಯುಜಿಸಿಯ ಈ ಶಿಫರಾಸ್ಸುಗಳು ಶಿಕ್ಷಣದ ಮೂಲ ತಿರುಳಾದ ಮಾನವನ ಚಾರಿತ್ರ್ಯ ನಿರ್ಮಾಣ ಪ್ರಕ್ರಿಯೆಗೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ. ಅಲ್ಲದೇ, ವಿದ್ಯಾರ್ಥಿಗಳನ್ನು ಗ್ರಾಹಕರಂತೆ ಮತ್ತು ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕಾಗಿ ನೋಡುತ್ತದೆ. ಜ್ಞಾನವು ಮರೆಯಾಗಿ, ಲಾಭ ಧೋರಣೆಯು ಈಗ ಉನ್ನತ ಶಿಕ್ಷಣದ ದೃಷ್ಟಿಕೋನವಾಗಿದೆ. 

ಯುಜಿಸಿಯು ಹೊರಡಿಸಿರುವ ಶಿಫರಾಸ್ಸುಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಎಐಡಿಎಸ್‌ಓ ಒತ್ತಾಯಿಸುತ್ತದೆ. ಶಿಕ್ಷಣವನ್ನು ನಾಶಪಡಿಸುವ ಯುಜಿಸಿಯ ಈ ಕುತಂತ್ರವನ್ನು ಸೋಲಿಸಲು ದೇಶದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಮುಂದಾಗಬೇಕೆಂದು ಂಋಖಓ ಜಿಲ್ಲಾ ಸಮಿತಿಯು ಮನವಿ ಮಾಡುತ್ತದೆ. ಎನ್‌ಇಪಿ-2020ರ ವಿರುದ್ಧದ ಪ್ರಬಲ ಪ್ರತಿರೋಧ ಚಳುವಳಿಗೆ ಮಾತ್ರ ಭಾರತದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಸಾಧ್ಯವಿದೆ.