ಆರ್ಸಿಬಿ ಅಭಿಮಾನಿಗಳಿಗೆ ಡಿವಿಲಿಯಸರ್್ ಸಿಹಿ ಸುದ್ದಿ


ಬೆಂಗಳೂರು 10: ಕಳೆ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅನಿರೀಕ್ಷಿತವಾಗಿ ವಿದಾಯ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾ ಸ್ಫೋಟಕ ಕ್ರಿಕೆಟಿಗ ಎಬಿ ಡಿವಿಲಿಯಸರ್್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಇನ್ಮುಂದೆ ಅವರ ಬ್ಯಾಟಿಂಗ್ ಅಬ್ಬರ ನೋಡಲು ಸಾಧ್ಯವಾಗುವುದಿಲ್ಲ ಎಂದು ಅನೇಕ ಕ್ರೀಡಾಭಿಮಾನಿಗಳು ಹತಾಶೆಗೊಳಗಾಗಿದ್ದರು. 

ಅದರೆ ಇದೀಗ ಮಿಸ್ಟರ್ ಫಪರ್ೆಕ್ಟ್ ಕ್ರೀಡಾಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಸುದ್ದಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಎಬಿಡಿ ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಕೆಲ ವರ್ಷ ಐಪಿಎಲ್ ಟೂನರ್ಿಯಲ್ಲಿ ಆರ್ಸಿಬಿ ತಂಡವನ್ನ ಪ್ರತಿನಿಧಿಸೋದಾಗಿ ಎಬಿಡಿ ಸ್ಪಷ್ಟಪಡಿಸಿದ್ದಾರೆ. ಐಪಿಎಲ್ ಟೂನರ್ಿಯ ಆರ್ಸಿಬಿ ಹಾಗೂ ಸೌತ್ಆಫ್ರಿಕಾದ ಟೈಟಾನ್ಸ್ ತಂಡದ ಪರ ಆಡೋದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡಲಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ. 

ಸೌತ್ಆಫ್ರಿಕಾ ದೇಸಿ ಕ್ರಿಕೆಟ್ನಲ್ಲಿ ಸಕ್ರೀಯವಾಗಿರುತ್ತೇನೆ ಎಂದಿರುವ ಎಬಿಡಿ, ಐಪಿಎಲ್ ಟೂನರ್ಿಯಲ್ಲಿ ಎಷ್ಟು ಆವೃತ್ತಿ ಆಡಲಿದ್ದಾರೆ ಎಂಬುದನ್ನ ಸ್ಪಷ್ಟಪಡಿಸಿಲ್ಲ. ಆದರೆ ಕೆಲ ವರ್ಷಗಳ ಕಾಲ ಐಪಿಎಲ್ ಟೂನರ್ಿಯಲ್ಲಿ ಮುಂದುವರಿಯೋದಾಗಿ ಮಾತ್ರ ಹೇಳಿದ್ದಾರೆ. ಇದು ಅವರ ಅಭಿಮಾನಿ ಹಾಗೂ ಆಸರ್ಿಬಿ ತಂಡಕ್ಕೆ ಸಂತೋಷ ನೀಡಿದೆ.