ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರಾಮನಗರದಿಂದ ವಿಧಾನಸೌದಕ್ಕೆ ಪಾದಯಾತ್ರೆ
ಬಳ್ಳಾರಿ 18: ಬೆಂಗಳೂರು ನಗರ, ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯು ರಾಮನಗರದಿಂದ ವಿಧಾನಸೌದಕ್ಕೆ ಪಾದಯಾತ್ರೆ ಹಮ್ಮಿಕೊಂಡಿದೆ.
ಈ ಬಗ್ಗೆ ಇಂದು ನಗರದ ಪತ್ರಿಕಾ ಭವನದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ವಿ.ಹೆಚ್. ಹುಲುಗಪ್ಪ, ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಅವರು ಸುದ್ದಿಗೋಷ್ಟಿ ನಡೆಸಿ. ಮಾ.21 ಮತ್ರು 22 ರಂದು ಎರೆಡು ದಿನ ಪಾದಯಾತ್ರೆ ನಡೆಯಲಿದೆ. 21 ರಂದುರಾಮನಗರದ ಕೆಂಪೆಗೌಡ ಸರ್ಕಲ್ ನಿಂದ ಆರಂಭಗೊಂಡು 58 ಕಿ.ಮೀ ದೂರದ ಬೆಂಗಳೂರಿನಲ್ಲಿರುವ ವಿಧಾನಸೌದದವರೆಗೆ ನಡೆಯಲಿದೆ.
ಚುನಾವಣೆ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಮಾಡಿ ತಾವು ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿಗೆ ತರಲಿದೆಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಎರೆಡು ವರ್ಷವಾದರೂ ಈವರಗೆ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಇಲ್ಲ. ಅದಕ್ಕಾಗಿ ಕೂಡಲೇ ಮೇಕೆದಾಟು ಯೋಜನೆಗೆ ಅನುದಾನ ತೆಗೆದಿರಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದುಬಳ್ಳಾರಿಯಿಂದ ಐದುನೂರು ಜನ ಹೋಗಲಿದೆಅಲ್ಲಿ ಹತ್ತು ಸಾವಿರ ಜನ ಸೇರಿ ಪಾದಯಾತ್ರೆ ನಡೆಸಲಿದೆ.ಸುದ್ದಿಗೋಷ್ಠಿಯಲ್ಲಿ ವಿ.ವೆಂಕಟೇಶ್, ಶಿವಣ್ಣ ಚಂದ್ರಾರೆಡ್ಡಿ, ನಗರ ಅಧ್ಯಕ್ಷ ವೀರಾರೆಡ್ಡಿ ಕೆ.ವೆಂಕಟೇಶ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.