ಡೆಪೂಟಿ ಚೆನ್ನಬಸಪ್ಪನವರು ಪ್ರಾರಂಭಿಸಿದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜ

A training college for boys started by Deputy Chennabasappa

ಡೆಪೂಟಿ ಚೆನ್ನಬಸಪ್ಪನವರು ಪ್ರಾರಂಭಿಸಿದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜ  

ಧಾರವಾಡ   1  : ಡೆಪೂಟಿ ಚೆನ್ನಬಸಪ್ಪನವರು ಪ್ರಾರಂಭಿಸಿದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜ. ಈಗಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ, ಇದರ ಉಪನ್ಯಾಸಕರಾದ ಬಾಲಚಂದ್ರ ಭಜಂತ್ರಿ ರವರು ದಿನಾಂಕ 28 - 2 - 2025 ರಂದು ಸುದಿರ್ಘ 35 ವರ್ಷಗಳ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆಸಲ್ಲಿಸಿ ವಯೋನಿವೃತ್ತಿಯಾಗಿದ್ದರಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಗೌರವಿಸಿ ಬಿಳ್ಕೊಡಲಾಯಿತು.  ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ ಸತ್ಕರಿಸಿ ಮಾತನಾಡಿ ಐತಿಹಾಸಿಕ ಹಿನ್ನಲೆ ಇರುವ ಈ ಸಂಸ್ಥೆಯು ಸ್ವಾತಂತ್ರ್ಯ ಕಾಲದ್ದಾಗಿದ್ದು ಕರ್ನಾಟಕ ಏಕೀಕರಣಕ್ಕೂ ಹೋರಾಟ ಮಾಡಿದ ಸಂಸ್ಥೆಯಾಗಿದೆ ಇಲ್ಲಿನ ಖಿಅಊ ಕಲಿಯುವ ವಿದ್ಯಾರ್ಥಗಳು ಇಲ್ಲದ್ದರಿಂದ ಅವಸಾನದ ಅಂಚಿನಲ್ಲಿದೆ. ಇಲ್ಲಿ ಬಿ.ಇಡಿ ಕಾಲೇಜು ಪ್ರಾರಂಭಿಸುದರ ಮೂಲಕ ಸರ್ಕಾರ ಇಂತಹ ಐತಿಹಾಸಿಕ ಸಂಸ್ಥೆಗಳನ್ನು ಉಳಿಸಿಕೊಳ್ಳಬೆಕೆಂದರು.  ಕಾರ್ಯದರ್ಶಿ ಬಿ. ಜಿ. ಬಶೆಟ್ಟ. ಪದಾಧಿಕಾರಿಗಳಾದ ಸುರೇಶ ಜಟ್ಟೆಣ್ಣವರ, ಪುಟ್ಟಪ್ಪ ಭಜಂತ್ರಿ, ಸುರೇಶ ಮುಗಳಿ  ಮಂಜುನಾಥ ಅಡಿವೆರ. ಶ್ರೀಧರ ಮುಂತಾದವರಿದ್ದರು.