ಬೆಂಗಳೂರು, ಮೇ 12, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 63 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ ಬಾಗಲಕೋಟೆಯಿಂದ 15, ದಾವಣಗೆರೆಯಿಂದ 12, ಧಾರವಾಡದಿಂದ 9, ಹಾಸನದಿಂದ 5, ಕೋಲಾರದಲ್ಲಿ 5, ಬೆಂಗಳೂರು ನಗರದಲ್ಲಿ 4, ಗದಗದಲ್ಲಿ 3, ಯಾದಗಿರಿ 2, ಬೀದರ್ 2, ದಕ್ಷಿಣ ಕನ್ನಡ 2, ಕಲಬುರ್ಗಿ1, ಚಿಕ್ಕಬಳ್ಳಾಪುರ 1, ಬಳ್ಳಾರಿ1 ಹಾಗೂ ಮಂಡ್ಯದಲ್ಲಿ 1 ಪ್ರಕರಣಗಳು ವರದಿಯಾಗಿವೆ. ಯಾದಗಿರಿ, ಮಂಡ್ಯ, ಬಾಗಲಕೋಟೆ, ಧಾರವಾಡ , ಹಾಸನ, ಗದಗ, ಕೋಲಾರ , ದಾವಣಗೆರೆ ಜಿಲ್ಲೆಗಳಿಗೆ ಅಹಮದಾಬಾದ್, ಮುಂಬೈ, ಒಡಿಶಾ, ಚೆನ್ನೈ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳವರಲ್ಲಿ ಸೋಂಕು ಪತ್ತೆಯಾಗಿದೆ.
ಯಾದಗಿರಿಗೆ ಅಹಮದಾಬಾದ್ ನಿಂದ ಆಗಮಿಸಿದ 2, ಮಂಡ್ಯಕ್ಕೆ ಮುಂಬೈನಿಂದ ಆಗಮಿಸಿದ ಓರ್ವರು, ಬಾಗಲಕೋಟೆಯ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 15, ಧಾರವಾಡದ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ 12, ಹಾಸನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಐವರು, ಗದಗದಲ್ಲಿ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಮೂವರು, ಕೋಲಾರಕ್ಕೆ ಚೆನ್ನೈ ಮತ್ತು ಒಡಿಶಾಗೆ ಪ್ರಯಾಣ ಬೆಳೆಸಿದ ಐವರು ಮತ್ತು ದಾವಣಗೆರೆಯಲ್ಲಿ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 925 ತಲುಪಿದೆ. ಇವರ ಪೈಕಿ 433 ಜನರು ಗುಣಮುಖರಾಗಿದ್ದಾರೆ. 32 ಜನರು ಮೃತಪಟ್ಟಿದ್ದಾರೆ. ಉಳಿದ 460ರಲ್ಲಿ 449 ಜನರು ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. 11 ಜನರನ್ನು ಐಸಿಯುನಲ್ಲಿ ಇರಿಸಲಾಗಿದೆ.
ಮಂಗಳವಾರ 7 ಜನರು ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ ಒಬ್ಬರು ಬಿಡುಗಡೆ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿ 182 ಸೋಂಕಿತರಿದ್ದು, ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿದೆ. ಬೆಳಗಾವಿ 113 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೈಸೂರು 88 ಪ್ರಕರಣಗಳೊಂದಿಗೆ 3, ದಾವಣಗೆರೆ 83 ಪ್ರಕರಣಗಳೊಂದಿಗೆ ನಾಲ್ಕನೇ ಮತ್ತು ಕಲಬುರಗಿ 73 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.