ರಾಜ್ಯದಲ್ಲಿ ಹೊಸ 178 ಕೊರೋನಾ ಪ್ರಕರಣಗಳು, ರಾಯಚೂರಿನಲ್ಲಿ 61, ಯಾದಗಿರಿಯಲ್ಲಿ 57

ಬೆಂಗಳೂರು, ಮೇ 29, ಯಾದಗಿರಿಯಲ್ಲಿ ಹೊಸದಾಗಿ 57 ಕೊರೋನಾ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯ ಆರು ಮಂದಿ ಸೇರಿ ರಾಜ್ಯದಲ್ಲಿ 178 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2711ಕ್ಕೇರಿಕೆಯಾಗಿದೆ.  ಇಲ್ಲಿಯವರೆಗೆ 869 ಮಂದಿ ಗುಣಮುಖರಾಗಿದ್ದು, 1793 ಸಕ್ರಿಯ ಪ್ರಕರಣಗಳು ವರದಿಯಾಗಿವೆ. 49 ಮಂದಿ ಮೃತಪಟ್ಟಿದ್ದಾರೆ. ರಾಯಚೂರಿನಲ್ಲಿ 61, ಉಡುಪಿಯಲ್ಲಿ 15, ಬೆಂಗಳೂರಿನಲ್ಲಿ 9, ಗುಲ್ಬರ್ಗಾ 15, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ 4, ಬೆಂಗಳೂರು ಗ್ರಾಮಾಂತರ 1, ಮೈಸೂರಿನಲ್ಲಿ 2, ಕಲಬುರಗಿಯಲ್ಲಿ 15 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.