ವಿವಿಧ ಕೋಲ್ಡ್ ಸ್ಟೋರೇಜ್ಗಳ ಮೇಲೆ ಕೃಷಿ ಅಧಿಕಾರಿಗಳ ತಂಡ ದಿಢೀರ ದಾಳಿ

ಬ್ಯಾಡಗಿ24: ಪಟ್ಟಣದಲ್ಲಿ ವಿವಿಧ ಕೋಲ್ಡ್ ಸ್ಟೋರೇಜ್ಗಳ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಅನಧೀಕೃತವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 3.5 ಕೋಟಿ ರೂ.ಮೌಲ್ಯದ ಗೋವಿನಜೋಳ ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

 ಉಪವಿಭಾಗಾಧಿಕಾರಿ ದಿಲೀಷ್, ಜಂಟೀ ಕೃಷಿ ನಿದರ್ೇಶಕ ಡಾ.ಬಿ.ಮಂಜುನಾಥ, ತಹಶೀಲ್ಧಾರ ಶರಣಮ್ಮ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ತಂಡವು ಪಟ್ಟಣದ ವೀರಶೈವ ಮುಕ್ತಿಧಾಮಕ್ಕೆ ಹೊಂದಿಕೊಂಡಿರುವ ಸೂರ್ಯ ಕೋಲ್ಡ್ ಸ್ಟೋರೇಜ್ ಹಾಗೂ ತಾಲೂಕಿನ ಛತ್ರ ಗ್ರಾಮದ ಬಳಿಯಿರುವ ವಕ್ರತುಂಡ ಕೋಲ್ಡ್ ಸ್ಟೋರೇಜ್ಗಳ ಮೇಲೆ ದಾಳಿಯನ್ನು ನಡೆಸಿತು.

ಸುಮಾರು 600 ಮೆಟ್ರಿಕ್ ಟನ್ ವಶಕ್ಕೆ: ಬೆಳಿಗ್ಗೆ ಸೂರ್ಯ ಕೋಲ್ಡ್ ಸ್ಟೋರೇಜ್ ಮೇಲೆ ದಾಳಿ ನಡೆಸಿದ ತಂಡವು ಎರಡೂ ಕೋಲ್ಡ್ ಸ್ಟೋರೇಜ್ಗಳಿಂದ ಸುಮಾರು 600 ಮೆಟ್ರಿಕ್ ಟನ್ಗೂ (ಸುಮಾರು 18ಸಾವಿರ ಚೀಲ)ಅಧಿಕ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ಸಂಸ್ಕರಿಸಿದ ಖುಲ್ಲಾ ಬೀಜ ಪತ್ತೆ: ದಾಳಿಯ ಸಂದರ್ಭದಲ್ಲಿ ಸಂಸ್ಕರಿಸಿದ(ಟ್ರೀಟ್ಮೆಂಟ್ ಸೀಡ್) ಖುಲ್ಲಾ ಬಿತ್ತನೆ ಬೀಜಗಳ ದೊಡ್ಡ ಲಾಟ್ಗಳು ಪತ್ತೆಯಾಗಿವೆ, ಸದರಿ ಚೀಲಗಳ ಮೇಲೆ ಬ್ಯಾಡ್ಜ ನಂಬರ್, ಮೊಳಕೆ(ಜೆಮರ್ಿಶನ್ ಪಸರ್ೆಂಟೇಜ್) ಒಡೆ ಯುವ ಪ್ರಮಾಣ, ದರಪಟ್ಟಿ (ಪ್ರೈಸ್) ಹಾಗೂ ಮುಕ್ತಾಯದ ಅವಧಿ (ಎಕ್ಸ್ಫೈಯರ್ ಡೇಟ್) ಸೇರಿದಂತೆ ಕೃಷಿ ಇಲಾಖೆ ಅಥವಾ ಸಕರ್ಾರ ಅನುಮತಿ ನೀಡಿದ ಇಂತಹ ಇನ್ಯಾವುದೇ ಅಧೀಕೃತ ಮೊಹರುಗಳು ಇರದಿರುವುದು ಸಾಕಷ್ಟು ಸಂಶಯ ಗಳಿಗೆ ಎಡೆ ಮಾಡಿಕೊಟ್ಟಿದೆ.

ಕೃತಕ ಅಭಾವ ಸೃಸ್ಟಿಸುವ ಮಾಫಿಯಾ: ಹಾವೇರಿ ಜಿಲ್ಲೆಯು ಏಷ್ಯಾದಲ್ಲೇ ಅತೀ ಹೆಚ್ಚು ಬೀಜೋತ್ಪಾದನೆ ಮಾಡುವ ಕೇಂದ್ರ ವಾಗಿದೆ, ಅದರಲ್ಲೂ ರಾಣೆಬೆನ್ನೂರ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಬೀಜೋತ್ಪಾದನೆ ಕೇಂದ್ರಗಳಿವೆ, ಬೀಜ ಸಂಗ್ರಹದ ಹಿಂದೆ ಪ್ರಸ್ತುತ ವರ್ಷವೇ ರೈತರಲ್ಲಿ ಕೃತಕ ಅಭಾವ ಸೃಷ್ಟಿಸುವ ದೊಡ್ಡ ಹುನ್ನಾರ ಇದರ ಹಿಂದೆ ಅಡಗಿರುವುದಾಗಿ ಅಧಿಕಾರಿ ಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ತಿರಸ್ಕೃತ (ಟೆಸ್ಟಿಂಗ್ ರಿಜೆಕ್ಟಡ್) ಬೀಜಗಳಿರಬಹುದು:ಪ್ರತಿವರ್ಷವೂ ಸಕರ್ಾರ ಹಾಗೂ ಕೃಷಿ ಇಲಾಖೆಯಿಂದ ಬೀಜಗಳ ಮೊ ಳಕೆ ಪ್ರಮಾಣದ (ಜೆಮರ್ಿಶನ್ ಕೌಂಟ್) ಪ್ರಯೋಗ ಪರೀಕ್ಷೆ (ಲ್ಯಾಬ್ ಟೆಸ್ಟಿಂಗ್) ನಡೆಸಲಾಗುತ್ತದೆ ಇಂತಹ ಸಂದರ್ಭದಲ್ಲಿ ರಿಜೆಕ್ಟ್ ಬೀಜಗಳನ್ನು ಸಕರ್ಾರದ ಕಣ್ತಪ್ಪಿಸಿ ಕಡಿಮೆ ದರಕ್ಕೆ ಮಾರಾಟ ಮಾಡುವ ಮಾಫಿಯಾದ ಕೈವಾಡವಿದ್ದ ಅವರಿಂದ ಸಂಗ್ರಹಿಸಿದ ಬೀಜಗಳಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

 ಕೃಷಿ ಇಲಾಖೆ ಉಪನಿದರ್ೇಶಕಿ ಜಿ.ಎಸ್.ಸ್ಪೂತರ್ಿ ಜಾಗೃತ ಕೋಶದ ಪ್ರಾಣೇಶ, ಸ್ಥಳೀಯ ಕೃಷಿ ಇಲಾಖೆಯ ಬಸವರಾಜ ಮರಗಣ್ಣವರ, ಆರ್.ಮಂಜುನಾಥ್, ರಕ್ಷಣಾ ಇಲಾಖೆ ಎಸ್.ಜಿ.ಕಂಬಳಿ, ಬಸವರಾಜ ಅಂಜುಟಗಿ, ಗಡಿಯಪ್ಪಗೌಡ್ರ, ಬೀರಪ್ಪ, ಅಶೋಕ ಬಾಕರ್ಿ, ಅನುವುಗಾರರಾದ ಅಣ್ಣಪ್ಪ ದ್ಯಾಮನಗೌಡ್ರ, ಮಾರುತಿ ದೊಡ್ಮನಿ, ಪ್ರಭು ಚಿಕ್ಕನಗೌಡ್ರ ಹಾಗೂ ಇನ್ನಿತರರು ದಾಳಿ ನಡೆಸಿದ ತಂಡದಲ್ಲಿದ್ದರು.