ಶ್ರೀನಗರ, ಜ 9 ವಿಶ್ವದ ವಿವಿಧ ದೇಶಗಳ 15 ಸದಸ್ಯರ ತಂಡ ಗುರುವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ಆಗಸ್ಟ್ 5ರಿಂದ ಗೃಹಬಂಧನದಲ್ಲಿರುವ ಮೂವರು ಮುಖ್ಯಮಂತ್ರಿಗಳು ಸೇರಿದಂತೆ ಇತರ ಮುಖ್ಯವಾಹಿನಿಯ ನಾಯಕರ ಕುರಿತು ಮಾಹಿತಿ ಕಲೆ ಹಾಕಿತು.
ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಇದು ಎರಡನೇ ಅಂತರಾಷ್ಟ್ರೀಯ ಗಣ್ಯರ ಭೇಟಿಯಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಈ ಗಣ್ಯರು ದೆಹಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿ ಕಚೇರಿಗಳಿಂದ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜನಸಂಚಾರವಿರುವ ರಸ್ತೆ ಮೂಲಕ ಖಾಸಗಿ ಹೋಟೆಲ್ ಗೆ ಕರೆದೊಯ್ಯಲಾಯಿತು. ಈ ಹಿಂದೆ ಅಕ್ಟೋಬರ್ ನಲ್ಲಿ ಆಗಮಿಸಿದ್ದ ತಂಡವನ್ನು ಜನಸಂಚಾರವಿರದ ರಸ್ತೆಯಲ್ಲಿ ಸಾಗಿಸಲಾಗಿತ್ತು. ನಂತರ ಅವರಿಗೆ ಅಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತು ಮಾಹಿತಿ ನೀಡಲಾಯಿತು.
ಆದರೆ, ಅನೇಕ ವ್ಯಾಪಾರ ಸಂಸ್ಥೆಗಳ ನಾಯಕರು, ತಮ್ಮ ಸಂಘದ ನಾಯಕರನ್ನು ಗೃಹಬಂಧನಲ್ಲಿಟ್ಟಿರುವುದರಿಂದ ತಂಡವನ್ನು ಭೇಟಿ ಮಾಡಲು ನಿರಾಕರಿಸಿವೆ. ಆದರೆ, ಕೆಲ ಸಣ್ಣ ಸಂಘಟನೆಗಳು ಮತ್ತು ವ್ಯಕ್ತಿಗಳು ಭೇಟಿ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.