ಕುಮಟಾ 20: ಪ್ರಜ್ವಲ ಟ್ರಸ್ಟ್ (ರಿ), ಶಿರಸಿ, ಕುಟುಂಬ ಯೋಜನೆ ಸಂಘ, ಕುಮಟಾ ಶಾಖೆ ಹಾಗೂ ಕೋರ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಗಾರದಲ್ಲಿ ಪತ್ರಕರ್ತೆ , ಹಾಗೂ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ ಕೃಷ್ಣಿ ಶಿರೂರ, ಹುಬ್ಬಳ್ಳಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕ್ಯಾನ್ಸರ್ ಖಾಯಿಲೆ ತಡೆಗಟ್ಟುವ ವಿಧಾನ, ಪೀಡಿತರಿಗೆ ವಿಶೇಷವಾಗಿ ಮುದ್ರಾ ಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಇತ್ತೀಚಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಬಿ.ಪಿ., ಶುಗರ್, ಮನೊಪಾಸ್, ಪಿ.ಸಿ.ಒ.ಡಿ ಹೀಗೆ ಹಲವಾರು ಖಾಯಿಲೆಗಳ ನಿವಾರಣೆಗಾಗಿ ವಿಶೇಷ ರೀತಿಯ ಮುದ್ರೆಗಳನ್ನು ತಿಳಿಸಿಕೊಟ್ಟರು.
ಉದ್ಘಾಟಕರಾಗಿ ಆಗಮಿಸಿದ ಕುಟುಂಬ ಯೋಜನಾ ಸಂಘದ ಅಧ್ಯಕ್ಷರಾದ ಡಾ. ಅಶೋಕ ಭಟ್ಟ ಹಳಕಾರ ಅವರು ನಮಗೆಲ್ಲ ಯೋಗ, ಪ್ರಾಣಾಯಾಮಗಳು ಎಷ್ಟು ಮುಖ್ಯ ಎನ್ನುವುದನ್ನ ವಿವರಿಸುವುದರೊಂದಿಗೆ ಇಂತಹ ಉಪಯುಕ್ತ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ, ಸಹಕಾರ ಸದಾ ಇರುತ್ತದೆ ಎನ್ನುವ ಭರವಸೆಯನ್ನು ನೀಡಿದರು. ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿ ಯೋಗ ಪ್ರಾಣಾಯಾಮ, ಲಘು ವ್ಯಾಯಾಮ ಹಾಗೂ ಜೀವನದಲ್ಲಿ ಕ್ಷಮೆಯ ಮಹತ್ವಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ವೈದ್ಯಾಧಿಕಾರಿಗಳಾದ ಡಾ. ಅನುರಾಧ, ಸ್ವಚ್ಛತೆಯ ಬಗೆಗೆ ಮುಖ್ಯವಾದ ಅಂಶಗಳನ್ನು ತಿಳಿಸಿದರೆ . ಡಾ. ರಾಧಿಕಾ ದಿನನಿತ್ಯದಲ್ಲಿ ಬೇಕಾಗುವಂತಹ ಮನೆ ಮದ್ದು ಹಾಗೂ ಆರೋಗ್ಯ ಮಾಹಿತಿಯನ್ನು ನೀಡಿದರು. ಕೋರ್ ಸಂಸ್ಥೆಯ ಪೂರ್ಣಿಮಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆದರ್ಶಗಳನ್ನು ತಿಳಿಸಿಕೊಟ್ಟರು.
ಕುಟುಂಬ ಯೋಜನಾ ಸಂಘದ ಶಾಖಾ ವ್ಯವಸ್ಥಾಪಕರಾದ ಸಂತಾನ ಲೂಯಿಸ್ ಅಭಿನಂದಿಸಿದರು. ಮೈತ್ರಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.