ಲೋಕದರ್ಶನವರದಿ
ಹೊಸಪೇಟೆ ಜು. 2: ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ಕಾಯರ್ಾಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹಾಗೂ ಸಲೀಂ ಅಹಮದ್ರವರು ಪದಗ್ರಹಣ ಮಾಡಿದ್ದು. ಇದರ ಅಂಗವಾಗಿ ನಗರದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಪದಗ್ರಹಣ ಸಮಾರಂಭವನ್ನು ಡಿಜಿಟಲ್ ಮತ್ತು ಜೂಮ್ ಕಾನ್ಫರೆನ್ಸ್ ಮೂಲಕ ನೇರ ವೀಕ್ಷಣೆ ಮಾಡಿ ಪದಗ್ರಹಣ ಪ್ರತಿಜ್ಞಾ ದಿನವನ್ನು ಆಚರಿಸಲಾಯಿತು.
ಈ ಪದಗ್ರಹಣ ಪ್ರತಿಜ್ಞಾ ದಿನದ ಕಾರ್ಯದಲ್ಲಿ ಮೊದಲಿಗೆ ಗಲ್ವಾನಾ ಗಡಿಯಲ್ಲಿ ವೀರ ಮರಣ ಹೊಂದಿದ 20 ಜನ ಸೈನಿಕರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು, ನಂತರ ವಂದೇ ಮಾತರಂ ಗೀತೆ ಹಾಡುವ ಮುಖಾಂತರ ಸಸಿಗೆ ನೀರು ಹಾಕಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ನಂತರ ಪಕ್ಷಕ ಎಲ್ಲಾ ಕಾರ್ಯಕರ್ತರಿಂದ ಸಂವಿಂಧಾನ ಪೀಠಿಕೆಯನ್ನು ಓದಿಸಲಾಯಿತು. ಹಾಗೂ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳುವ ಬಗ್ಗೆ ಸಾಮೂಹಿಕ ಪ್ರತಿಜ್ಞಾ ಮಾಡಲಾಯಿತು.
ಈ ಸಮಾರಂಭವನ್ನು ಉದ್ದೇಶಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೇಸ್ರಾದ ಹೆಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಇಂದು ಕಾಂಗ್ರೇಸ್ ಪಕ್ಷಕ್ಕೆ ಐತಿಹಾಸಿಕ ದಿನವಾಗಿದ್ದು.
ಈ ಐತಿಹಾಸಿಕ ಪದಗ್ರಹಣ ಕಾರ್ಯವನ್ನು ಇಂದು ರಾಜ್ಯಾದ್ಯಾಂತ ಸುಮಾರು 14 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ 19 ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ವೀಕ್ಷಣೆ ಮಾಡಲಾಗುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ ಸುಮಾರು 31 ಸ್ಥಳಗಳಲ್ಲಿ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಪಕ್ಷದ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ನವ ದೂರ ದೃಷ್ಟಿ ಹಾಗೂ ನವ ಮಾರ್ಗದೊಂದಿಗೆ ನವ ಕನರ್ಾಟಕದ ನಿಮರ್ಾಣದ ಮುನ್ನೋಟವನ್ನು ಹೊಂದಿದ್ದು ಅವರ ಮುನ್ನೋಟಕ್ಕೆ ಎಲ್ಲಾ ಕಾರ್ಯಕರ್ತರು ಅವರ ಜೊತೆಯಾಗಿ ನಿರಂತರವಾಗಿ ಪಕ್ಷವನ್ನು ಕ್ಷೇತ್ರದಲ್ಲಿ ಭದ್ರವಾಗಿ ಸಂಘಟಿಸಿ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆಯೆಂದು ಹೇಳಿದರು.
ಈ ಪದಗ್ರಹಣ ಪ್ರತಿಜ್ಙಾ ದಿವಸ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನೇರವಾಗಿ ಹೊಸಪೇಟೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಕಾಯರ್ಾಧ್ಯಕ್ಷರುಗಳಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹಾಗೂ ಸಲೀಂ ಅಹಮದ್ರವರಿಗೆ ಶುಭಕೋರಿದರು.
ಈ ಪ್ರತಿಜ್ಞಾ ದಿವಸದ ಕಾರ್ಯಕ್ರಮದಲ್ಲಿ ವೆಂಕಟರಾವ್ ಘೋರಪಡೆ, ಕೆಪಿಸಿಸಿ ಉಸ್ತುವಾರಿ ಅಮ್ಜಾದ ಪಟೇಲ್, ಕಮಲಾಪುರ ಉಸ್ತುವಾರಿ ಕಣೆಕಲ್ ಮಬೂಸಾಬ್, ಪಕ್ಷದ ಮುಖಂಡರಾದ ಗುಜ್ಜಲ್ ನಾಗರಜ್, ವಿ.ಸೋಮಪ್ಪ , ವೆಂಕಟರಮಣ, ಭಾಗ್ಯಲಕ್ಷಿ ಬರಾಡೆ, ಕ್ಯಾರೋಲಿನ್ ಸ್ಮಿತ್, ನಿಂಬಗಲ್ ರಾಮಕೃಷ್ಣ , ಸತ್ಯನಾರಾಯಣ , ಸೇವಾದಳ ಮಾರಪ್ಪ , ಯಂಕಪ್ಪ , ರಾಮನಗೌಡ , ಚಿದಾನಂದಪ್ಪ, ಎಸ್.ಬಿ.ಮಂಜುನಾಥ, ಷಾಷಾವಲಿ, ಬಾಣದ ಗಣೇಶ್ , ಗುಜ್ಜಲ್ ರಾಘವೇಂದ್ರ, ವಿಜಯ್ ಕುಮಾರ್, ಲಿಯಾಕತ್, ಶ್ರೀನಿವಾಸ್, ಶ್ರೀ ಕೃಷ್ಣ, ಮುನ್ನಿಖಾಸಿಂ, ತೇಜಾನಾಯ್ಕ , ಈ ಕಾರ್ಯಕ್ರಮದ ಸಾಮಾಜಿಕ ಜಾಲತಾಣದ ಉಸ್ತುವಾರಿಗಳಾದ ಜಿಲ್ಲಾ ಸಂಚಾಲಕರಾದ ಆಲನ್ ಭಕ್ಷಿ, ಮತ್ತು ತಾಲೂಕು ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ತಾಜುದ್ದೀನ್, ಇತರರು ಭಾಗವಹಿಸಿದರು.