ಸ್ವ-ಗ್ರಾಮಕ್ಕೆ ಮರಳಿದ ನಿವೃತ್ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಸ್ವ-ಗ್ರಾಮಕ್ಕೆ ಮರಳಿದ ನಿವೃತ್ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ A retired soldier receives a grand welcome from the villagers upon returning to his home village

ಲೋಕದರ್ಶನ ವರದಿ 

ಕಾಗವಾಡ 10 : ಕಳೆದ 23 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ, ರವಿವಾರ ದಿ. 10 ರಂದು ತಾಲೂಕಿನ ಜುಗೂಳ ಗ್ರಾಮಕ್ಕೆ ಆಗಮಿಸಿದ ಗಜಾನನ ಅಂಬಿ ದಂಪತಿಯನ್ನು ಗೆಳೆಯರ ಬಳಗ ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಭವ್ಯ ಮೆರವಣಿಗೆ ಮುಖಾಂತರ ಗ್ರಾಮಕ್ಕೆ ಬರಮಾಡಿಕೊಂಡರು. ಬಸ್ ನಿಲ್ದಾಣದಿಂದ ಪೇಟೆಯ ಮಾರ್ಗವಾಗಿ ಭವ್ಯ ಮೆರವಣಿಗೆಯ ಮೂಲಕ ಆಗಮಿಸಿದ ಯೋಧ ಗಜಾನನ ಅಂಬಿಯವರನ್ನು ಗ್ರಾಮದಲ್ಲಿ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. ಈ ವೇಳೆ ಗ್ರಾಮದ ಯುವಕರು ಪುಷ್ಪಾರ್ಚನೆ ಮಾಡಿ, ಭಾರತ ಮಾತಾಕೀ ಜೈ, ಜೈ ಹಿಂದ್ ಎಂಬ ಘೋಷಣೆಗಳನ್ನು ಕೂಗಿ ಸಂಬ್ರಮಿಸಿದರು. 

ನಂತರ ನಡೆದ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಪಪೂ ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಗಳು ವೀರ ಯೋಧನನ್ನು ಸನ್ಮಾನಿಸಿ, ಮಾತನಾಡುತ್ತ, ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಸಿನಿಮಾ ನಟ, ನಟಿಯರು ಆದರ್ಶವಾಗಬಾರದು. ವೀರ ಯೋಧರು ಮಾದರಿಯಾಗಬೇಕು. ಜೊತೆಗೆ ದೇಶ ಕಾಯುವ ವೀರ ಯೋಧರು ಸ್ಪೂರ್ತಿಯಾಗಬೇಕು. ಕಳೆದ 23 ವರ್ಷಗಳಿಂದ ದೇಶ ಸೇವೆ ಮಾಡಿ, ತಾಯ್ನಾಡಿಗೆ ಆಗಮಿಸಿರುವ ಗಜಾನನ ಹಾಗೂ ಅವರ ಧರ್ಮಪತ್ನಿ ಯೋಗಿತಾ ಅವರು ಇನ್ನು ಮುಂದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಗ್ರಾಮದ ಆಸಕ್ತ ಯುವಕರು ಸೇನೆ ಸೇರಲು ಅವರಿಗೆ ಸೂಕ್ತ ಮಾಹಿತಿ ಮತ್ತು ತರಬೇತಿ ನೀಡಬೇಕೆಂದರು. ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಲಿ ಎಂದ ಅವರು ಬಿಸಿಲು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ, ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು. 

ಸಾನಿಧ್ಯವನ್ನು ಹಬಪ ಚಂದ್ರಕಾಂತ ಪಾಟೀಲ ಮಹಾರಾಜರು ವಹಿಸಿ, ಆಶೀರ್ವಚನ ನೀಡಿದರು. ನಂತರ ನೂರಾರು ಗ್ರಾಮಸ್ಥರು, ಬಂಧು ಬಾಂಧವರು, ಸ್ನೇಹಿತರು ಯೋಧನಿಗೆ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ವಹಿಸಿ, ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ 75 ವರ್ಷವಾದರೂ 25 ರ ಹರೆಯದವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಗಜಾನನ ಅಂಬಿ ಅವರಿಗೆ ಈಗ ಕೇವಲ 43 ವರ್ಷ. ಅದಕ್ಕಾಗಿ ಅವರು ತಮ್ಮ ನಿವೃತ್ತಿ ಜೀವನವನ್ನು ಸಮಾಜ ಸೇವೆಗೆ ಮುಡುಪಾಗಿಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಶುಭ ಕೋರಿದರು. ಈ ವೇಳೆ ವೇದಿಕೆಯ ಮೇಲೆ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಬಾಲಚಂದ್ರ ಅಂಬಿ, ಅಕ್ಕಾತಾಯಿ ಅಂಬಿ, ಯೋಗಿತಾ ಅಂಬಿ, ಕಲ್ಲಪ್ಪ ಅಂಬಿ, ದಾದಾ ಅಂಬಿ, ಸುರೇಶ ಪಾಟೀಲ, ಬಿ.ಐ. ಪಾಟೀಲ, ಅನೀಲ ಕಡೋಲೆ, ರಾಜು ಕಡೋಲೆ, ತಾತ್ಯಾಸಾಬ ಅಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮನೋಜ ಮಡಿವಾಳ ಸ್ವಾಗತಿಸಿದರು. ಅನಿಲ ಮಿಣಚೆ ನಿರೂಪಿಸಿದರು. ಮಹೇಳ ಬೆಳ್ಳಂಕ್ಕಿ ವಂದಿಸಿದರು.