ಕವಿವ ಸಂಘ ನಾಡಿಗೆ ವಿಶಿಷ್ಟವಾದ ಕೊಡುಗೆ ನೀಡಿದ ಅಪರೂಪದ ಸಂಘ

ಧಾರವಾಡ 03: ಕನ್ನಡ ಸಾಹಿತ್ಯ ಪರಿಷತ್ತಿನ ಮಾತೃ ಸಂಸ್ಥೆಯ ಸ್ಥಾನದಲ್ಲಿರುವುದು, ಕನ್ನಡ ನಾಡಿನ ಅತ್ಯಂತ ಹಿರಿಯ ಮತ್ತು ಹೆಮ್ಮೆಯ ಸಂಸ್ಥೆ ಕನರ್ಾಟಕ ವಿದ್ಯಾವರ್ಧಕ ಸಂಘ. ಕನರ್ಾಟಕ ವಿದ್ಯಾವರ್ಧಕ ಸಂಘ ಈ ನಾಡಿಗೆ  ವಿಶಿಷ್ಟವಾದ ಕೊಡುಗೆ ನೀಡಿದ  ಅಪರೂಪವಾದ ಏಕೈಕ ಸಂಘ. ಇಂತಹ ವಿಶೇಷ ಸ್ಥಾನ-ಮಾನ, ಗೌರವ ಹೊಂದಿದ ಕನರ್ಾಟಕ ವಿದ್ಯಾವರ್ಧಕ ಸಂಘಕ್ಕೆ ಔಪಚಾರಿಕವಾಗಿ ಆಮಂತ್ರಣ ಪತ್ರಿಕೆ ನೀಡಿ, ಇಡೀ ಕನ್ನಡ ಸಮುದಾಯವನ್ನು ಜನೇವರಿ 4,5,6 2019 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು. 

ಇಂದು ಸಂಜೆ 5 ಗಂಟೆಗೆ ಕನರ್ಾಟಕ ವಿದ್ಯಾವರ್ಧಕ ಸಂಘಕ್ಕೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಇತರೇ ಪದಾಧಿಕಾರಿಗಳ ಜೊತೆ ಆಗಮಿಸಿದ ಡಾ. ಮನು ಬಳಿಗಾರ ಕವಿವ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿಯವರಿಗೆ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಇವರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಆಮಂತ್ರಣ ಪತ್ರಿಕೆ ನೀಡಿ, ಅವರು ಮಾತನಾಡುತ್ತಿದ್ದರು. 

ಸಾರಸ್ವತಲೋಕದ ದಿಗ್ಗಜರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ನಾಡೋಜ ಡಾ. ಚೆನ್ನವೀರ ಕಣವಿ, ಡಾ. ಗುರಲಿಂಗ ಕಾಪಸೆ, ಡಾ. ಜಿ.ಎಂ. ಹೆಗಡೆ, ಡಾ. ರಾಘವೇಂದ್ರ ಪಾಟೀಲ, ಡಾ. ರಮಾಕಾಂತ ಜೋಶಿ, ಪ್ರೊ. ಹಸನಬೀ ಬೀಳಗಿ, ಮನೋಹರ ಗ್ರಂಥಮಾಲಾ ಈ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಕ್ತಾರರಿದ್ದಂತೆ. ಎಲ್ಲ ಕನ್ನಡಿಗರ ಪರವಾಗಿ, ಕನ್ನಡಿಗರ ಪ್ರತಿನಿಧಿಗಳಂತಿರುವ ಇವರಿಗೆ ಈ ದಿವಸ, ಅವರ ನಿವಾಸಗಳಿಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿದ್ದೇನೆ ಮತ್ತು ಈ ಸಮ್ಮೇಳನದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕೆಂದು ವಿನಂತಿಸುತ್ತೇನೆ ಎಂದು ಬಳಿಗಾರ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಸಮ್ಮೇಳನದ ಸರ್ವ ಸಿದ್ಧತೆಗಳು ಆಗಿದ್ದು, ಈ ನಾಡಿನ ಜನ ನೀಡಿದ ಸ್ಪಂದನೆ ನಮಗೆಲ್ಲ ಧೈರ್ಯ ತಂದಿದೆ, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ತೇರು ಎಳೆಯುವ ಕಾಯಕದಲ್ಲಿ ಭಾಗಿಯಾಗಬೇಕೆಂದರು. 

ಕವಿವ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, 62 ವರ್ಷಗಳ ನಂತರ ಧಾರವಾಡದಲ್ಲಿ ಈ ಸಾಹಿತ್ಯ ಸಮ್ಮೇಳನ ಜರುಗಲು ಮೂಲ ಕಾರಣೀಕರ್ತರು ಡಾ. ಮನು ಬಳಿಗಾರ, ಮನು ಬಳಿಗಾರರ ಬದ್ಧತೆಯಿಂದ ಸಮ್ಮೇಳನದ ತಯ್ಯಾರಿ ಈ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ತೃಪ್ತಿದಾಯಕವಾಗಿ ಸಾಗಿದೆ, ಈ ಸಮ್ಮೇಳನ ಹಿಂದೆಂದಿಗಿಂತಲೂ ಯಶಸ್ವಿಯಾಗಿ ಜರುಗಲಿ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘ ಶುಭ ಹಾರೈಸುತ್ತದೆ ಮತ್ತು ತನ್ನ ಎಲ್ಲ ಸಹಾಯ-ಸಹಕಾರ ನೀಡುತ್ತದೆ ಎಂದರು. 

ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ, ಪ್ರಫುಲ್ಲಾ ನಾಯಕ, ಎಸ್.ಬಿ. ಗಾಮನಗಟ್ಟಿ ಹಾಗೂ ಜಾನಪದ ವಿದ್ವಾಂಸ ಬಸವಲಿಂಗಯ್ಯ ಹಿರೇಮಠ, ಐ,ಕೆ ಬಳ್ಳೂರ, ಪ್ರಿ. ಎನ್.ಆರ್. ಬಾಳಿಕಾಯಿ, ಬಿ.ಕೆ. ಹೊಂಗಲ, ಮಾರ್ಕಂಡೇಯ ದೊಡಮನಿ, ಯಕ್ಕೆರಪ್ಪ ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು. 

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದನಾರ್ಪಣೆ ಗೈದರು.