ಕಂಪ್ಲಿ.04: ಕಂಪ್ಲಿ-ಕೋಟೆಯ ಸುಂಕ್ಲಮ್ಮ ದೇವಸ್ಥಾನದ ಹತ್ತಿರ ನೂರಾರು ಚೀಲ ಭತ್ತ ತುಂಬಿದ್ದ ಬೃಹತ್ ಲಾರಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಗಂಗಾವತಿಯಿಂದ ತಮಿಳು ನಾಡಿಗೆ ಭತ್ತವನ್ನು ತುಂಬಿಕೊಂಡು ಹೊರಟಿದ್ದ ಬೃಹತ್ ಲಾರಿ ಕೋಟೆಯ ಸುಂಕ್ಲಮ್ಮ ದೇವಸ್ಥಾನದ ಹತ್ತಿರದ ಬೃಹತ್ ಕಂದಕಕ್ಕೆ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಇಲ್ಲಿ ರಸ್ತೆ ಸ್ವಲ್ಪ ಕಿರಿದಾಗಿರುವುದರ ಜೊತೆಗೆ ರಸ್ತೆಯ ಕೆಳಗೆ ಹಳ್ಳವಿದ್ದು, ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಿರಿದಾಗಿರುವ ಕಾರಣ ಎದುರಿಗೆ ಬರುವ ವಾಹನಗಳಿಗೆ ಮಾರ್ಗ ಬಿಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಕಂದಕಕ್ಕೆ ಉರುಳಿದೆ.
ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಬೃಹತ್ ಲಾರಿಯಲ್ಲಿದ್ದ ಸುಮಾರು 400 ಚೀಲ ಭತ್ತ ಕಂದಕಕ್ಕೆ ಬಿದ್ದಿದ್ದು, ಇದರಲ್ಲಿ ಸುಮಾರು ನೂರಕ್ಕ ಅಧಿಕ ಚೀಲ ಭತ್ತ ನೀರಲ್ಲಿ ಬಿದ್ದು, ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ. ಬೃಹತ್ ಲಾರಿ ಕಂದಕಕ್ಕೆ ಉರುಳಿದ ಪರಿಣಾಮ ಕೆಲವು ಸಮಯ ಗಂಗಾವತಿ ಕಂಪ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.