ಬೆಟಗೇರಿ: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗುರೂಜಿ ಬಂದರು ಗುರುವಾರ ಎಂಬ ವಿಶೇಷ ಕಾರ್ಯಕ್ರಮವನ್ನು ಕಳೆದೆರಡು ವಾರದಿಂದ ಆಯೋಜಿಸಿ, ಪ್ರತಿ ಗುರುವಾರ ಶಾಲಾವಧಿ ಬಳಿಕ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಮನೆ ಮನೆಗೆ ಮುಖ್ಯಾಧ್ಯಾಪಕ, ಶಿಕ್ಷಕರು ತೆರಳಿ ಹೆಚ್ಚಿನ ತರಬೇತಿ ನೀಡಲು ಆರಂಭಿಸಿದ್ದಾರೆ.
ಗುರುವಾರ ನ.28, ಡಿ.5 ರಂದು ಶಾಲೆಯ ಹಲವಾರು ಜನ ವಿದ್ಯಾಥರ್ಿಗಳ ಮನೆಗೆ ತೆರಳಿ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಗಣಿತ ವಿಷಯ ಶಿಕ್ಷಕ ಮಂಜುನಾಥ ಹತ್ತಿ, ಮಲ್ಹಾರಿ ಪೋಳ ಅವರು ವಿದ್ಯಾರ್ಥಿಗಳ ಮನೆಗಳಲ್ಲಿಯೇ ಸುಮಾರು 1 ಗಂಟೆಗಳ ಕಾಲ ಉಳಿದು ಗಣಿತ ವಿಷಯದಲ್ಲಿರುವ ಕಠಿಣ ಪಾಠಗಳ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಹೇಳಿಕೊಡುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾಥರ್ಿಗಳಿಗೆ ಪ್ರತಿ ಗುರುವಾರಕ್ಕೂಮ್ಮೆ ಶಿಕ್ಷಕರು ಮನೆ ಮನೆಗೆ ತಮ್ಮ ವಿಷಯದ ಕುರಿತು ಪಾಠ ಪ್ರವಚನ ಹೇಳಿಕೊಡುತ್ತಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಅರಿವು, ಭಯ ಮುಕ್ತ ವಾತಾವರಣ ನಿರ್ಮಾಣ ಹೊಗಲಾಡಿಸುವುದರ ಜೋತೆಗೆ ಮಕ್ಕಳ ನಿತ್ಯದ ಕಲಿಕೆಗೆ ಪ್ರೇರಣೆ ಹಾಗೂ ಕಲಿಕೆ ಸಮಸ್ಯೆಗಳಿಗೆ ಪರಿಹಾರ, ಪಾಲಕರಿಗೆ ಸಲಹೆ ನೀಡಿದಂತಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
"ಗುರೂಜಿ ಬಂದರು ಗುರುವಾರ ಎಂಬ ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿದೆ. ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ಹೊಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಜೊತೆಗೆ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕರ ನಡುವಿನ ಅವಿನಾಭಾವ ಸಂಬಂಧವೂ ಸಹ ಬೆಸೆಯುತ್ತದೆ. * ಅಜೀತ ಮನ್ನಿಕೇರಿ. ಬಿಇಒ ಮೂಡಲಗಿ ವಲಯ.
"ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟ. ವಿದ್ಯಾರ್ಥಿಗಳಿಗೆ ಈ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ. * ಕುತುಬು ಮಿರ್ಜಾನಾಯ್ಕ. ಅಧ್ಯಕ್ಷರು ಎಸ್ಡಿಎಮ್ಸಿ ವಿವಿಡಿ ಸ.ಪ್ರೌ.ಶಾಲೆ ಬೆಟಗೇರಿ, ತಾ.ಗೋಕಾಕ.