ಅರಮನೆಯಲ್ಲಿ ಗಜ ಪಡೆಗೆ ಅದ್ದೂರಿ ಸ್ವಾಗತ: ದಸರಾ ಮಹೋತ್ಸವಕ್ಕೆ ದಿನಗಣನೆ

ಮೈಸೂರು, ಆ 26   ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ  ಭಾಗಿಯಾಗಲು  ಆಗಮಿಸಿದ  ಮೊದಲ ತಂಡದ ಗಜ ಪಡೆಗೆ ಅರಮನೆಯ ಜಯಮಾರ್ಥಾಡ್ ದ್ವಾರದಲ್ಲಿ ಆತ್ಮೀಯ,  ಸಾಂಪ್ರದಾಯಿಕ  ಸ್ವಾಗತ ನೀಡಲಾಯಿತು.  

ಇದರೊಂದಿಗೆ  ಮೈಸೂರು ನಗರದಲ್ಲಿ ದಸರಾ  ಸಡಗರ, ಸಂಭ್ರಮ  ಇಂದಿನಿಂದಲೇ  ಗರಿಕೆದರಿದ್ದು,  ದಸರಾ ಮಹೋತ್ಸವಕ್ಕೆ ದಿನಗಣನೆಯೂ ಆರಂಭವಾಗಿದೆ.   

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಅನೆಗಳಿಗೆ ಹೂಮಾಲೆ ಹಾಕಿ  ಸ್ವಾಗತ ಕೋರಿದರು. ಅರ್ಜುನ ನೇತೃತ್ವದ ಆರು ಆನೆಗಳು ಇಂದು ಅರಮನೆಗೆ ಆಗಮಿಸಿವೆ.  

ಉಗ್ರರ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ  ಮೈಸೂರು ಅರಣ್ಯ ಭವನದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 

ಮೈಸೂರು ದಸರಾ ಗಜಪಡೆ ಬಳಿ ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಶೋಧ ನಡೆಸಲಾಗಿದ್ದು,  

ಮುಂಜಾಗ್ರತಾ ಕ್ರಮವಾಗಿ ಅರಣ್ಯ ಭವನದಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. 

ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಆನೆಗಳನ್ನು ಬೀಳ್ಕೊಡಲಾಯಿತು. ಅರಣ್ಯ ಭವನದಲ್ಲಿ ಪೂಜೆ ಮುಗಿದ ಬಳಿಕ ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಗಜಪಡೆ ಸಾಗಿ  ಜಯಮಾರ್ಥಾಡ್ ದ್ವಾರದ ಮೂಲಕ ಅರಮನೆ ಅವರಣ ಪ್ರವೇಶ ಮಾಡಿತು . 

ಇದರೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೊದಲ ಹಂತದ ಗಜಪಡೆಯನ್ನು ನೋಡಲು ದಾರಿಯುದ್ದಕ್ಕೂ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ಸಾಲುಗಟ್ಟಿನಿಂತಿದ್ದರು. 

ದಸರಾ ಗಜಪಡೆಯ ನೋಡಲು ಮುಗಿ ಬಿದ್ದ ಸಾರ್ವಜನಿಕರು. 

ರಸ್ತೆ ಮಾರ್ಗವಾಗಿ ಸುಮಾರು 12 ಗಂಟೆ ವೇಳೆಗೆ ಅರಮನೆ ತಲುಪಲಿರುವ ಗಜಪಡೆ. 

ಇದೇ ಮೊದಲ ಬಾರಿ ದಸರಾ ಗಜಪಡೆಯಲ್ಲಿ ಭಾಗವಹಿಸಿರುವ ಆನೆ ಈಶ್ವರ. 

ಮೊದಲ ಭಾರಿಗೆ ಪೂಜೆಯಲ್ಲಿ ಭಾಗಿಯಾಗಿ ಪೂಜೆಗೆ ಸಹಕರಿಸಿದ ಈಶ್ವರ. 

ಡಿಸಿ ಸೇರಿದಂತೆ ಅರಣ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ.