ಲೋಕದರ್ಶನ ವರದಿ
ಸಂಬರಗಿ 09: ಕಳೆದ 15 ದಿನಗಳಿಂದ ಗಡಿಭಾಗದ ಗ್ರಾಮಗಳಲ್ಲಿ ಬಾರಿ ಮಳೆಯಿಂದ ದ್ರಾಕ್ಷಿ ಬೆಳೆ ಕುಸಿದ್ದಿದ್ದು, ವಿವಿಧ ರೋಗಗಳಿಂದ ದ್ರಾಕಿ ಬೆಳೆಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ರೈತರು ಸಾಲಪಡೆದು ದ್ರಾಕ್ಷಿ ಬೆಳೆಯನ್ನು ಮಾಡಿದ್ದರು, ಬೆಳೆಹಾನಿಯಿಂದ ದ್ರಾಕ್ಷಿಬೆಳೆಯಗೆ ಪಡೆದ ಸಾಲ ಮರುಪಾವಿತಮಾಡಲು ಬಾರಿ ಆವಾಹನವಾಗಿದೆ.
ಮಹರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ದ್ರಾಕ್ಷಿಬೆಳೆ ಹೆಚ್ಚಿದ್ದು ಅದರ ಪರಿಣಾಮ ಸಾಂಗಲಿ ಜಿಲ್ಲೆಗೆ ಹತ್ತಿರ ಇರುವ ಗಡಿಭಾಗದ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆ ಹೆಚ್ಚಾಗಿದ್ದ ಕಾರಣ ಈ ಭಾಗದ ಅನೇಕ ಗ್ರಾಮಗಳಲ್ಲಿ 70% ರೈತರು ದ್ರಾಕ್ಷಿ ಬೆಳೆಕಡೆ ಒತ್ತು ನೀಡಿದ್ದಾರೆ. ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ಸಾಲಪಡೆದು ಖೋತವಾಡಿ, ಖಿಳೇಗಾಂವ, ಶಿರೂರ,ಸಂರಗಿ, ಅರಳಿಹಟ್ಟಿ, ಮದಭಾವಿ, ವಿಷ್ಟಣುವಾಡಿ, ಬೋಮ್ಮನಾಳ, ಜಂಬಗಿ, ಕಲ್ಲೋತ್ತಿ, ಕಿರಣಗಿ, ಮಲಾಬಾದ, ಬಳ್ಳಿಗೇರಿ, ಚಮಕೇರಿ, ಬ್ಯಾಡರಟ್ಟಿ, ಗುಂಡೇವಾಡಿ ಸೇರಿದಂತ ಗ್ರಾಮಗಳಲ್ಲಿ ದ್ರಾಕ್ಷಿಬೆಳೆಹೆಚ್ಚಾಗಿದ್ದು ಪಡೆದಿರುವ ಸಾಲವನ್ನು ಮರುಪಾವತಿ ಮಾಡಿ ವರ್ಷದಲ್ಲಿ 5 ರಿಂದ 8 ಲಕ್ಷ ರೂ. ಲಾಭ ಪಡೆಯುತ್ತಿದ್ದು. ಆದರೆ ಕಳೆದ 3 ವರ್ಷದಿಂದ ಬೀರಕ ಬರಗಾಲದಿಂದ ಜನ ತತ್ತರಿಸುತ್ತಿದ್ದು. ದ್ರಾಕ್ಷಿ ಬೆಳೆ ರೈತರು ಬೆಸಗಿಯಲ್ಲಿ ಟ್ಯಾಂಕರಗಳಿಂದ ನೀರು ಖರೀದಿಮಾಡಿ ದ್ರಾಕ್ಷಿ ಬೆಳೆಯನ್ನು ಬೆಳೆದ್ದಿದ್ದರು.
ಈ ವರ್ಷ ಸೀನಾಕಾ, ಮಾಣಿಕ ಚಮನ್, ತಾಮ್ಸ್ಮ್ ಚಮನ, ಸೂಪರ ಸೋನಾಕಾ, ಈ ಜಾತಿಯ ದ್ರಾಕ್ಷಿ ಉತ್ಪಾದಕ ರೈತರ ಬೆಳೆ ಕೈಯಲ್ಲಿ ಬಂದ ಬಾರಿ ಮಳೆಯಿಂದ ಹಾಗೂ ವಿವಿಧ ರೋಗಗಳಿಂದ ದ್ರಾಕ್ಷಿ ಗೋನಿ ನೆಲಕಚ್ಚಿಹೋಗಿದೆ. ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ. ಈ ಭಾಗದಲ್ಲಿ ಸಾವಿರಾರು ಎಕರೆ ದ್ರಾಕ್ಷಿಬೆಳೆ ನಷ್ಟವಾಗಿದ್ದು ರೈತರು ಚಿಂತಾಜನಕವಾಗಿದ್ದಾರೆ. ಈ ವರ್ಷ ದ್ರಾಕ್ಷಿಬೆಳೆಗೆ ಪಡೆದಿರುವ ಸಾಲವನ್ನು ದ್ರಾಕ್ಷಿ ಹಾಳಗಿ ಹೋಗಿದ್ದಕಾರಣ ಮರುಪಾವತಿ ಮಾಡಲು ಬಾರಿ ಸಮಸ್ಯ ಎದರಿಸುಬೇಕಾಗುತ್ತದೆ.
ಈ ಕುರಿತು ದ್ರಾಕ್ಷಿ ಉತ್ಪಾದಕರು ಅಣ್ಣಪ್ಪ ನಿಂಬಾಳ ಇವರನ್ನು ಸಂಪರ್ಕಿಸಿದಾಗ ಈ ಬಾಗದಲ್ಲಿ ಕಳೆದ 15 ವರ್ಷದಿಂದ ಈ ವರ್ಷ ಬಾರಿ ಮಳೆ ಹಾಗೂ ರೋಗಗಳಿಂದ ದ್ರಾಕ್ಷಿಯ ಲಕ್ಷಾಂತರ ರೂ. ಹಾನಿಯಾಗಿದೆ ಇನ್ನೂವರೆಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಭೇಟ್ಟಿ ನೀಡಿ ಪರಿಸಿಲ ನೇಮಾಡಿಲ್ಲ. ಈ ವರ್ಷ ರೈತರಿಗೆ ಸಾಲ ಮರುಪಾವತಿಮಾಡಲು ಬಾರಿ ಕಷ್ಟವಾಗಿದೆ. ರಾಜ್ಯ ಸರಕಾರ ಪರಿಸಿಲನೇಮಾಡಿ ದ್ರಾಕ್ಷಿಬೆಳೆಗಾರರ ಪರಿಸಲನೇಮಾಡಿ ಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಇಲ್ಲವಾದರೆ, ರೈತರು ಆತ್ಮಹತ್ತೆಗೆ ಶರನಾಗುವ ಪರಿಸ್ಥಿತಿ ಎದರಿಸುಬೇಕಾಗುತ್ತದೆ.
ತೋಟಗಾರಕೆ ಇಲಾಖಾ ಅಧಿಕಾರಿಯಾದ ಎಸ್.ಎನ್. ಕುಡ್ಡನ್ನವರ ಇವರನ್ನು ಸಂಪರ್ಕಿಸಿದಾಗ ಬಾರಿ ಮಳೆಯಿಂದ 6.250 ಎಕರೆ ದ್ರಾಕ್ಷಿ ಮಳೆ ಹಾಗೂ ವಿವಿಧ ರೋಗಗಳಿಂದ ಹಾನಿಯಾಗಿದೆ. ದಾರವಾಡ ವಿಶ್ವವಿದ್ಯಾಲಯದಿಂದ ಒಂದು ವಿಶೇಷ ತಂಡದ ಮುಖಾಂತರ ಪರಿಶೀಲನೆ ಮಾಡಲಾಗುವುದೆ. ಹಾನಿಯಾಗಿರುವ ದ್ರಾಕ್ಷಿ ಮೇಲಾಧಿಕಾರಿಗಳ ಮೂಲಕ ಮಾಹಿತಿ ಸಲ್ಲಿಸಲಾಗುವುದು ರೈತರು ದ್ರಾಕ್ಷಿ ಬೆಳೆ ವಿಮೆಯನ್ನು ಎಕರೆಗೆ 5600ರೂ ರಾಷ್ಟ್ರೀಕೃತ ಬ್ಯಾಂಕ್ಗೆ ಹಣ ಪಾವತಿಸಬೇಕೆಂದು ವಿನಂತಿಸಿದರು.