ಕಿತ್ತೂರು ಉತ್ಸವ ವಿಜಯ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ

ದೇವರಹಿಪ್ಪರಗಿ 15: ಕಿತ್ತೂರು ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಸೋಮವಾರ ರಾತ್ರಿ ಪಟ್ಟಣದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಸಮುದಾಯದ ಮುಖಂಡ ಚನ್ನವೀರ​‍್ಪ ಕುದರಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.  

ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ದೇವಸ್ಥಾನದ ಮುಂದೆ ಕಿತ್ತೂರು ಚೆನ್ನಾಜಿಯವರ ವಿಜಯ ಜ್ಯೋತಿ ಯಾತ್ರೆಯನ್ನು ತಹಶೀಲ್ದಾರ್ ಪ್ರಕಾಶ ಸಿಂದಗಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಲಾ ತಂಡಗಳೊಂದಿಗೆ ಸಾಗಿದ ವಿಜಯ ಜ್ಯೋತಿ ಯಾತ್ರೆಗೆ ಸಮುದಾಯದ ಹಿರಿಯ ಮುಖಂಡ ಚನ್ನವೀರ​‍್ಪ ಕುದರಿ ಅವರ ನೇತೃತ್ವದ ಮುಖಂಡರು ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚನ್ನಮ್ಮ ಪುತ್ಥಳಿಗೆ ಹಾರ ಅರ​‍್ಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ.23 ರಿಂದ 25 ರವರೆಗೆ ನಡೆಯಲಿರುವ ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುವ ಈ ವಿಜಯ ಜ್ಯೋತಿ ಯಾತ್ರೆ ಪಟ್ಟಣದಲ್ಲಿ ಸಮುದಾಯದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ, ನಂತರ ಪಡಗಾನೂರ ಕ್ರಾಸ್ ಹತ್ತಿರ ಬೀಳ್ಕೊಡಲಾಯಿತು ಎಂದು ಹೇಳಿದರು. 

ಸಮುದಾಯದ ಮುಖಂಡರುಗಳಾದ ಬಾಬು ಗೌಡ ಪಾಟೀಲ(ಜಿಡ್ಡಿಮನಿ), ಶಂಕರಗೌಡ ಪಾಟೀಲ(ಯರನಾಳ), ಕೆ.ಜಿ.ಬಾವಿಮನಿ, ಪಂಚಾಕ್ಷರಿ ಮಿಂಚಿನಾಳ, ಗೊಲ್ಲಾಳ ಹಿಟ್ನಳ್ಳಿ, ಶಿವನಗೌಡ ಪಾಟೀಲ, ರಾಮು ದೇಸಾಯಿ, ಅಪ್ಪು ಗೌಡ ಪಾಟೀಲ, ಪವನ ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಅನಿಲ ರಾಠೋಡ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.