ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ
ರಾಣೇಬೆನ್ನೂರು 04: ಸಿ.ಆರ್.ಪಿ.ಎಫ್. ನಲ್ಲಿ ಸುದೀರ್ಘ 35 ವರ್ಷ 05 ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಆಗಮಿಸಿದ ಸಿ.ಆರ್.ಪಿ.ಎಫ್ ಯೋಧ ಮೆಡ್ಲೇರಿ ಗ್ರಾಮದ ನಾಗಪ್ಪ ಭಜಂತ್ರಿಯವರನ್ನು ವಿವಿಧ ರೈತಪರ, ಕನ್ನಡಪರ ಸಂಘಟನೆಗಳು ಮತ್ತು ತಾಲೂಕಾ ಶ್ರೀ ಶಿವಶರಣ ಶ್ರೀ ನೂಲಿಯ ಚಂದಯ್ಯ ಕೊರಮ ಸಮಾಜದ ವತಿಯಿಂದ ನಗರದ ಕೇಂದ್ರ ಬಸ್‌ನಿಲ್ದಾಣದಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಹಸಿರು ಶಾಲು ಹೊದಿಸುವ ಮೂಲಕ ವೀರ ಯೋಧನಿಗೆ ಸತ್ಕರಿಸಿದರು. ಕೊರಮ ಸಮಾಜದ ತಾಲೂಕಾ ಅಧ್ಯಕ್ಷರಾದ ಅರುಣುಕುಮಾರ ಕೆ. ಕೊರಗರ ಇದೇ ಸಂದರ್ಭದಲ್ಲಿ ಸಮಾಜದ ವತಿಯಿಂದ ವೀರ ಯೋಧನಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ವೀರ ಯೋಧನನ್ನು ಸತ್ಕರಿಸಿದರು. ಮೆರವಣಿಗೆ ಕೇಂದ್ರ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಸ್ವ ಗ್ರಾಮ ಮೆಡ್ಲೇರಿಗೆ ಕರೆದುಕೊಂಡು ಹೋಗಲಾಯಿತು. ಈ ಕಾರ್ಯಕ್ರಮದಲ್ಲಿ ರಮೇಶ ಹೂಲಿಹಳ್ಳಿ, ರೇವಣಪ್ಪ ಕೊರವರ, ಗಂಗಪ್ಪ ಭಜಂತ್ರಿ, ನಾಗರಾಜ ಕೊರವರ, ಚಂದ್ರು ಕೊರವರ, ನೂರಂದಪ್ಪ ಭಜಂತ್ರಿ, ರಾಘವೇಂದ್ರ ಭಜಂತ್ರಿ, ಹನುಮಂತಪ್ಪ ಭಜಂತ್ರಿ, ಮಂಜುನಾಥ ಕೊರವರ, ಶೇಖಪ್ಪ ಭಜಂತ್ರಿ, ಪರಶುರಾಮ ಕಬ್ಬೂರ, ಶ್ರೀಕಾಂತ ಕೊರವರ, ಅನೀಲ ಮೇಲಿನಮನಿ ಮತ್ತಿತರರು ಉಪಸ್ಥಿತರಿದ್ದರು.