ಮುಂಡಗೋಡ 21: ಶ್ರೀರಾಮನವಮಿಯ ನಿಮಿತ್ತ ತಾಲೂಕು ಶ್ರೀರಾಮ ಸೇನೆಯಿಂದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಸಾಯಂಕಾಲ ಬೃಹತ್ ಶೋಭ ಯಾತ್ರೆ ವಿಜೃಂಭನೆಯಿಂದ ನಡೆಯಿತು.
ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾರಿಕಾಂಬಾ ದೇವಸ್ಥಾನದಿಂದ ಶ್ರೀರಾಮನ ಭವ್ಯ ಮೂರ್ತಿಯ ಮೆರವಣಿಗೆ ಪ್ರಾರಂಭವಾಯಿತು. ಸುತ್ತಮುತ್ತಲಿನ ತಾಲೂಕಿನ ಜನರು ಡಿಜೆ ಹಾಡಿನ ಅಬ್ಬರ, ಕಲರ್ ಫುಲ್ ಲೈಟಿಂಗ್ ಜೊತೆಗೆ ಹೆಜ್ಜೆ ಹಾಕುತ್ತ ಸಾವಿರಾರು ಸಂಖ್ಯೆಯ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.