ಅದ್ದೂರಿಯಾಗಿ ಜರುಗಿದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

A grand palanquin festival of Jagadguru

ತಾಳಿಕೋಟೆ 03: ತಾಲೂಕಿನ ನಾವದಗಿ ಗ್ರಾಮದ ಶ್ರೀಮದ್ ಉಜ್ಜಯಿನಿ ಶಾಖಾ ರಾಜಗುರು ಪರ್ವತೇಶ್ವರ ಸಂಸ್ಥಾನ ಬ್ರಹನ್ ಮಠ ನಾವದಗಿಯ ಪೂಜ್ಯ ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಪ್ರಥಮ ಗುರು ಪಟ್ಟಾಧಿಕಾರ ಮಹೋತ್ಸವದ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡ ರಂಭಾಪುರಿ ಹಾಗೂ ಕೇದಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.  

ನಾವದಗಿ ಗ್ರಾಮದ ಬ್ರಹನ್ಮಠದಿಂದ ಸಕಲ ವಾದ್ಯ ಮೇಳ ಗಳೊಂದಿಗೆ ಆರಂಭವಾದ ಉಭಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀ ಮಠದ ಆವರಣಕ್ಕೆ ತಲುಪಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಜನಜಾಗೃತಿ ಧರ್ಮಸಭೆ ಜರುಗಿತು. ಮೆರವಣಿಗೆಯಲ್ಲಿ ಪೂಜ್ಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಶಿವಯೋಗಿ ಶಿವಾಚಾರ್ಯರು, ಕಲಕೇರಿ ಸಿದ್ದರಾಮ ಶಿವಾಚಾರ್ಯರು, ಮನಗೂಳಿಯ ಶ್ರೀ ಸಂಗನಬಸವ ಶಿವಾಚಾರ್ಯರು, ಪುರಾಣಿಕ ಬಸಯ್ಯ ಶಾಸ್ತ್ರಿಗಳು ಹಾಗೂ ಹಲವಾರು ಪೂಜ್ಯರು, ಗ್ರಾಮದ ಗಣ್ಯರು ಹಿರಿಯರು ಇದ್ದರು.