ಕಳೆದ 50 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ನಿಕಟ ಸಂಪರ್ಕ ಹೊಂದಿರುವದರ ಜತೆಗೆ ಜಿಲ್ಲಾಘಟಕದ ಕಾರ್ಯದಶರ್ಿಯಾಗಿ, ಅ. ಭಾ. ಕ. ಸಾ. ಸಮ್ಮೇಳನ (1980) ಕಾರ್ಯದಶರ್ಿಯಾಗಿ, ಆಜೀವ ಸದಸ್ಯನಾಗಿ ಇದ್ದು ಅಧ್ಯಕ್ಷರಾದವರನ್ನು ಇಂಚು - ಇಂಚು ಬಲ್ಲೆ.
ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ದಿ|| ಅರವಿಂದ ಜೋಶಿಯವರು ಕೇಂದ್ರ ಗೃಹ ಸಚಿವರಾಗಿದ್ದ ದಿ|| ಬಳವಂತರಾವ್ ದಾತಾರ್ರ ಆಪ್ತ ಸಹಾಯಕರಾಗಿದ್ದು ಗಡಿವಿವಾದದ ಆಳ - ಅಗಲಗಳನ್ನು ತಿಳಿದಿದ್ದರು. ಅವರೇ ಪ್ರಥಮ ಜಿಲ್ಲಾ ಅಧ್ಯಕ್ಷರಾಗಿ ಕ.ಸಾ.ಪ. ಘಟಕಕ್ಕೆ ಭದ್ರ ಬುನಾದಿ ಹಾಕಿದರು. ಅವರಿಗೆ ಹೆಗಲಿಗೆ ಹೆಗಲು ಹಚ್ಚಿ ಸೇವೆ ನೀಡಿದವರು - ದಿ|| ವಿ.ಸಿ. ಮಾಲಗತ್ತಿ. ಅವರು ಕ್ರಿಯಾಶೀಲರೂ, ಉತ್ತಮ ಸಂಘಟಕರೂ ಆಗಿದ್ದರು. ಸಾಹಿತಿಯಾಗಿ ಅವರ ಸಾಧನೆಗಳಿರಲಿಲ್ಲ. ಆದರೆಅವರ ಪ್ರಯತ್ನಗಳಿಂದ ಅ.ಭಾ. 80 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೆ.ಎಲ್.ಇ. ಅಂಗಳದಲ್ಲಿ 1980 ರಲ್ಲಿ ಜರುಗಿ ಅಭೂತ ಪೂರ್ವಕನ್ನಡ ಜಾಗೃತಿ ನಿರ್ಮಿಸಿತು. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದ ದಿ|| ಮಲ್ಲಾರಿಗೌಡ ಪಾಟೀಲರ ನೆರವು ಪಡೆದು ಚನ್ನಮ್ಮಾ ವೃತ್ತದ ಸಮೀಪವಿರುವ ನ್ಯಾಯಾಂಗದ ನಿವೇಶನ ಪಡೆದು ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಿ ಬೆಳಗಾವಿ ಕನ್ನಡಿಗರ ಶಕ್ತಿ ಕೇಂದ್ರತಲೆ ಎತ್ತಿತು. ಶ್ರೀ ಎಸ್. ಎಂ. ಕುಲಕಣರ್ಿಯವರು (ವಕೀಲರು) ಅಂದಿನಿಂದಲೂ ಬೆಳಗಾವಿ ಕನ್ನಡಿಗರ ಚಟುವಟಿಕೆಗಳಿಗೆ ಬಲ ತುಂಬುತ್ತ ಬಂದರು. ಕನ್ನಡಿಗರ ಹೋರಾಟಗಳು ಹೋರಾಟ ತಪ್ಪಿದಾಗ ದಿ|| ರಾಘವೇಂದ್ರ ಜೋಶಿಯವರು ಚಾಟಿ ಬೀಸುತ್ತಲೇ ಬಂದರು, ಮಾರ್ಗದರ್ಶನ ಮಾಡಿದರು. ಆಗ ಕನರ್ಾಟಕ ರಾಜ್ಯ ರಕ್ಷಣಾ ವೇದಿಕೆ ಹಾಗೂ ಇತರೆ ಚಳವಳಿಗಾರರ ಸಂಘಟನೆಗಳು ಕ್ರಿಯಾಶೀಲವಾಗಿರಲಿಲ್ಲ. ಬೆಳಗಾವಿಯ ಸ್ಥಾನಿಕ ಹೋರಾಟಗಾರರೇ ಮುನ್ನೆಲೆಯಲ್ಲಿ ಇದ್ದರು. ಆಥರ್ಿಕವಾಗಿ ಬಲಹೀನರಾಗಿದ್ದರೂ ಅವರಕನ್ನಡ ಅಭಿಮಾನ ಅಸಾಧಾರಣ- ಅನನ್ಯವೆನಿಸಿತು.
ಕಳೆದ ಶತಮಾನದ 70 ರದಶಕದಲ್ಲಿಕನ್ನಡ ಸಾಹಿತ್ಯ ಪರಿಷತ್ತಿಗೆ, ಜಿಲ್ಲಾ ಘಟಕಗಳಿಗೆ, ತಾಲೂಕು ಘಟಕಗಳಿಗೆ ಇಂದಿನಂತೆ ಸರಕಾರದ ಅನುದಾನ ಬರುತ್ತಿರಲಿಲ್ಲ. ನಾಮಮಾತ್ರ ನಿರ್ವಹಣಾ ವೆಚ್ಚಕ್ಕೆ ಅಷ್ಟೋ ಇಷ್ಟೋ ನೀಡುತ್ತಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತಿತ್ತು. ಹೀಗಾಗಿ ಯಾರೂ ಕೈಯಿಂದ ಹಣಖಚರ್ು ಮಾಡಿ ಅಧ್ಯಕ್ಷರಾಗಲು ಬಯಸುತ್ತಿರಲಿಲ್ಲ. ಎಲ್ಲವನ್ನೂ ಅಭಿಮಾನಕ್ಕಾಗಿ ಮಾಡುತ್ತಿದ್ದರು. ಹಾಗೂ ಅನೇಕರು ಸ್ವಂತದ ಹಣವನ್ನೂ ಖಚರ್ು ಮಾಡುತ್ತಿದ್ದರು.
ದಿವಂಗತ ವ್ಹಿ. ಸಿ. ಮಾಲಗತ್ತಿಯವರ ಕಾಲಕ್ಕೆ ಅನೇಕ ಸಾಹಿತಿಗಳೂ ಅವರನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದರು. ಕಾರಣ ಅವರು ಸಾಹಿತಿಗಳಾಗಿರಲಿಲ್ಲ. ಆದರೆ ಮಾಲಗತ್ತಿಯವರ ಕಾಲಕ್ಕೆ ಅಧಿಕಾಧಿಕ ಕಾರ್ಯಕ್ರಮಗಳು ಜರುಗಿದ್ದು ವಾಸ್ತವ.
ವ್ಹಿ. ಸಿ. ಮಾಲಗತ್ತಿ, ಡಾ. ಎಸ್. ಎಂ. ಹರದಗಟ್ಟಿ ಮುಂ. ಎರಡೆರಡು ಮೂರು-ಮೂರು ಸಲ ಬೆಳಗಾವಿ ಜಿಲ್ಲಾಘಟಕದ ಅಧ್ಯಕ್ಷರಾಗಿದ್ದರು. ಡಾ. ಹರದಗಟ್ಟಿ ಲಿಂಗರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ, ನಂತರ ಪ್ರಾಚಾರ್ಯರೂ ಆಗಿದ್ದು - ಅವರಿಗೆ ಪ್ಲಸ್ ಪಾಯಿಂಟ ಆಗಿತ್ತು. ಅವರು ಒಳ್ಳೆಯ ವಾಗ್ಮಿಯೂಆಗಿದ್ದರು. ಅವರು ಅಧ್ಯಕ್ಷರಾಗಿದ್ದಾಗಲೇ ಬೆಳಗಾವಿಯಲ್ಲಿ 2003 ರಲ್ಲಿ 70 ನೇ ಅ. ಭಾ. ಕ. ಸಾ. ಸಮ್ಮೇಳನ ಜರುಗಿತು. ಈ ನಡುವೆ ಪ್ರೊ. ಸಿ. ವಿ. ಜ್ಯೋತಿ, ಡಾ. ವ್ಹಿ. ಜಿ. ಹಿರೇಮಠ, ಎನ್. ಕೆ. ಇಂಚಲ, ಮೋಹನಗೌಡ ಪಾಟೀಲ, ಶಾಂತಪ್ಪಣ್ಣ ಮಿಜರ್ಿ, ಡಾ. ಬಸವರಾಜ ಜಗಜಂಪಿ, ಯ. ರು. ಪಾಟೀಲ, ಶ್ರೀಮತಿ ಮಂಗಳಾ ಮೆಟಗುಡ್ ಇವರು ಒಂದೊಂದು ಅವಧಿಗೆ ಅಧ್ಯಕ್ಷರಾಗಿ ಕ.ಸಾ.ಪ. ಮುನ್ನಡೆಸಿದರು. ಇವರಲ್ಲಿ ಪ್ರೊ. ಸಿ. ವ್ಹಿ. ಜ್ಯೋತಿ, ಡಾ. ವಿ. ಜಿ. ಹಿರೇಮಠ, ಡಾ. ಬಸವರಾಜ ಜಗಜಂಪಿ ಹಾಗೂ ಯ. ರು. ಪಾಟೀಲರು ಕನ್ನಡ ನಾಡು - ನುಡಿಗಳ ತೀವ್ರ ಕಾಳಜಿ ಹೊಂದಿದವರಾಗಿ ಉತ್ತಮ ಹಿನ್ನಲೆ ಹೊಂದಿದ್ದರು. ಇವರಲ್ಲಿ ಮತ್ತೆಡಾ. ಬಸವರಾಜ ಜಗಜಂಪಿ ಖ್ಯಾತ ವಾಗ್ಮಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟರು. ಶ್ರೀ ಯ. ರು. ಪಾಟೀಲರು ಮಾತಿನಲ್ಲಿ ಬಿರುಸುಕಂಡರೂ ಸಾಹಿತ್ಯ ಚಟುವಟಿಕೆಗಳನ್ನು - ಗಡಿಭಾಗಗಳಿಗೆ ಧೈರ್ಯದಿಂದ ಕೊಂಡೊಯ್ದ ಪ್ರಥಮ ಅಧ್ಯಕ್ಷರೆನಿಸಿದರು. ಅವರಅವಧಿಯಲ್ಲಿ ಖಾನಾಪೂರ, ನಿಪ್ಪಾಣಿ, ಬಾಳೇಕುಂದ್ರಿ ಹಾಗೂ ಅಥಣಿಗಳಲ್ಲಿ ಸಾಹಿತ್ಯ ಸಮ್ಮೇಳನ ಸಂಘಟಿಸಿದರು.
ದಿ|| ಎನ್. ಕೆ. ಇಂಚಲ ಶಿಕ್ಷಣಾಧಿಕಾರಿಗಳಾಗಿ ಜನಪ್ರಿಯರೂ ಆಗಿದ್ದರು. ದಿ|| ಶಾಂತಪ್ಪಣ್ಣ ಮಿಜರ್ಿಯವರೂ ಚಿಕ್ಕೋಡಿ ಭಾಗದಲ್ಲಿ ಪ್ರಸಿದ್ಧ ಸಹಕಾರಿಗಳಾಗಿ, ದಾನಿಗಳಾಗಿ, ಸಾಹಿತಿಗಳಾಗಿ ಚೇತನ ಶಕ್ತಿಯಾಗಿ ಕಾರ್ಯನಿರ್ವಹಿಸಿದರು. ಶ್ರೀ ಮೋಹನಗೌಡ ಪಾಟೀಲರು ಸಾಹಿತಿಯಾಗಿ ಗುರುತಿಸಿಕೊಳ್ಳದಿದ್ದರೂ ನೆಹರು ನಗರದಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ನಿವೇಶನವನ್ನುಅಧಿಕೃತವಾಗಿ ನೋಂದಾಯಿಸಲು ಶ್ರಮಿಸಿದರು. ಅವರು ಕೇವಲ ಕವಿ ಸಮ್ಮೇಳನಗಳನ್ನು ಸಂಘಟಿಸವದು. ಬಸವ ಸಮಿತಿ ಚಟುವಟಿಕೆಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡರು. ಶ್ರೀಮತಿ ಮಂಗಳಾ ಮೆಟಗುಡ್ಅವರ ಕಾಲಕ್ಕೆ ಕ.ಸಾ.ಪ. ಅಧ್ಯಕ್ಷರಕಾಲಾವಧಿ- 3 ರಿಂದ 5 ವರ್ಷಗಳಿಗೆ ವಿಸ್ತರಿಸಿತು. ತಾಲೂಕು ಹಾಗೂ ಜಿಲ್ಲಾ ಘಟಕಗಳಿಗೆ ಅನುದಾನ ದೊರೆಯಹತ್ತಿತು. ಎಲ್ಲ ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದರು. ಹೇಗೆ ನಡೆಸಿದರು ಎನ್ನುವದುಎಲ್ಲರಿಗೂಗೊತ್ತಿರುವ ಸಂಗತಿ.ಆದರೆ ಬೆಳಗಾವಿ ಜಿಲ್ಲೆಯ ಗುರುತಿಸಿಕೊಂಡ ಸಾಹಿತಿಗಳು - ಲೇಖಕರು - ಕವಿಗಳು ಇವರಿಂದದೂರ ಉಳಿದು ಬಿಟ್ಟರು ಎನ್ನುವದು ವಾಸ್ತವ. ಸರಕಾರಿ ಅನುದಾನದ ಬಲದಿಂದ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನಗಳು, ತಾಲೂಕು ಸಮ್ಮೇಳನಗಳು ಜರುಗಿದವು. ಅನೇಕ ಕಡೆಗಳಲ್ಲಿ ಸಂಘಟಕರು ಎಡವಟ್ಟುಗಳನ್ನು ಮಾಡಿದರು. ಇದ್ದುದರಲ್ಲಿ ಗೋಕಾಕ ಹಾಗೂ ಕಾಗವಾಡಗಳಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮ್ಮೇಳನಗಳು ಗಮನ ಸೆಳೆದವು. ನಿಪ್ಪಾಣಿಯಲ್ಲಿ ಜರುಗಿದ ತಾಲೂಕು ಸಮ್ಮೇಳನದಲ್ಲಿ ಆಮಂತ್ರಿತರಿಗೆ ಭೋಜನದ ವ್ಯವಸ್ಥೆ ಎಕ್ಕುಟ್ಟಿ ಹೋಗಿತ್ತು. ಬಹುತೇಕ ಸಮ್ಮೇಳನಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಪ್ರಧಾನವಾಗಿ ಕಾಣಿಸಿಕೊಂಡರು. ಸರಕಾರಿ ಅನುದಾನ ದೊರೆಯದೇ ಇದ್ದ ಕಾಲಘಟ್ಟದಲ್ಲಿ ಸಾಹಿತಿಗಳು - ಕವಿಗಳು ಗುರುತಿಸಿಕೊಂಡಷ್ಟು ಇಂದಿನ ಕಾಲಘಟ್ಟದಲ್ಲಿ ಗುರುತಿಸಿಕೊಳ್ಳಲಿಲ್ಲ. ಡಾ. ವಿ. ಎಸ್. ಮಾಳಿ, ಡಾ. ಗುರುಪಾದ ಮರಿಗುದ್ದಿ, ಡಾ. ಬಸವರಾಜಜಗಜಂಪಿ, ಪ್ರೊ. ಚಂದ್ರಶೇಖರ ಅಕ್ಕಿ, ಶ್ರೀ ಮಹಾಲಿಂಗ ಮಂಗಿ, ಶ್ರೀ ಐ. ಆರ್. ಮಠಪತಿ, ಪ್ರೊ. ಎಲ್. ವಿ. ಪಾಟೀಲ, ಶ್ರೀ ಬಿ. ಎಸ್. ಗವಿಮಠ, ಶ್ರೀ ಎ. ಎ. ಸನದಿ, ಶ್ರೀ ಶಿರೀಷ ಜೋಶಿ, ಡಾ. ಡಿ. ಎಸ್. ಚೌಗಲೆ, ಡಾ. ರಾಮಕೃಷ್ಣ ಮರಾಠೆ, ಡಾ. ಎ. ಬಿ. ಘಾಟಗೆ, ರಾಣಿಚನ್ನಮ್ಮ ವಿ.ವಿ. ಯಕನ್ನಡ ಪ್ರಾಧ್ಯಾಪಕರುಜತೆಗೆ ಅನೇಕ ಯುವ ಲೇಖಕ - ಲೇಖಕಿಯರು, ಕವಿಗಳು ಅವಕಾಶ ವಂಚಿತರಾದರು. ಇನ್ನೂ ಅನೇಕ ಲೇಖಕ - ಲೇಖಕಿಯರ ಹೆಸರುಗಳು ನೆನಪಿಗೆ ಬರುತ್ತಿಲ್ಲ. (ಉದಾ: ಡಾ. ಪಿ. ಜಿ. ಕೆಂಪಣ್ಣವರ, ಡಾ. ಸುಬ್ರಾವಎಂಟೆತ್ತಿನವರ ಮುಂ.)
ಬೆಳಗಾವಿ ಕ.ಸಾ.ಪ. ಜಿಲ್ಲಾಅಧ್ಯಕ್ಷ ಸ್ಥಾನಕ್ಕೆ ಯಾರು ಹಿತ?
ಈಗ ಚುನಾವಣಾಕಣದಲ್ಲಿ ನ್ಯಾಯವಾದಿ ಶ್ರೀ ರವೀಂದ್ರ ತೋಟಿಗೇರ, ಗೋಕಾಕದ ಚಳವಳಿಗಾರ ಶ್ರೀ ಬಸವರಾಜ ಖಾನಪ್ಪನವರ ಹಾಗೂ ಗೋಕಾಕ ತಾಲೂಕಿನ ಅಕ್ಕ ತಂಗೇರ ಹಾಳದ ಶ್ರೀ ಮರಲಿಂಗಣ್ಣವರ ಸುರೇಶ ಉಳಿದಿದ್ದಾರೆ. ಅಧ್ಯಕ್ಷರಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಕಳೆದ ಸಲವೇ ಅವರು ಸ್ಫಧರ್ಿಸಲು ಸಿದ್ಧರಾಗಿದ್ದರು. ಹಿರಿಯರ ಮಾತಿನಂತೆ ಹಿಂದೆ ಸರದಿದ್ದರು. ಕ.ಸಾ.ಪ. ಚುನಾವಣೆಗಳು ಬಂದಾಗ ಮಾತ್ರ ಕಾಣಿಸಿಕೊಳ್ಳುವ ಇವರು ಉಳಿದ ಅವಧಿಯಲ್ಲಿ ಕ.ಸಾ.ಪ. ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದು ಕಂಡು ಬಂದಿಲ್ಲ.
ಶ್ರೀ ಬಸವರಾಜ ಖಾನಪ್ಪನವರ ಗೋಕಾಕ ಭಾಗದಲ್ಲಿ ಕನ್ನಡ ಚಳವಳಿಗಾರರಾಗಿ ಗುರುತಿಸಿಕೊಂಡಿದ್ದು ಸಾಹಿತ್ಯಕ್ಕಿಂತ ಹೋರಾಟ ಇವರಿಗೆ ಪ್ರಧಾನವಾಗಿರುವದನ್ನು ಕಂಡಿದ್ದೇವೆ. ಈ ಸಲ ಗೋಕಾಕ ತಾಲೂಕಿನವರೇ ಜಿಲ್ಲಾ ಅಧ್ಯಕ್ಷರಾಗಬೇಕೆಂದು ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಅಕ್ಕತಂಗೇರ ಹಾಳದ ಶ್ರೀ ಸುರೇಶ ಮರಲಿಂಗಣ್ಣವರ ಹೆಸರು ಸಾಹಿತ್ಯ ಕ್ಷೇತ್ರಕ್ಕೆ ಹೊಸದು. ಇತ್ತೀಚೆಗೆ ಲೋಕಸಭಾ -ಉಪಚುನಾವಣೆಯಲ್ಲಿ ಸ್ಪಧರ್ಿಸಲು ನಾಮಪತ್ರ ಸಲ್ಲಿಸಿದ್ದರು.
ಪ್ರಸ್ತುತ ಚುನಾವಣೆಯಲ್ಲಿ ಉಳಿದಿರುವ ಅಭ್ಯಥರ್ಿಗಳಲ್ಲಿ ಶ್ರೀಮತಿ ಮಂಗಲಾ ಮೆಟಗುಡ್ಅವರೇ ಅನಿವಾರ್ಯದ ಆಯ್ಕೆಯಾಗುವ ನಿರೀಕ್ಷೆ ಇದೆ. ಅವರುಕೆ.ಎಲ್.ಇ. ಸಂಸ್ಥೆಯ ಹಾಗೂ ಸಮಾಜದ ಬೆಂಬಲ ಪಡೆಯುವತ್ತ ದಾಪುಗಾಲು ಹಾಕಿದ್ದಾರೆ. ಏನಾದರೂ ಸ್ಪಧರ್ೆ ಇದ್ದರೆ ಅದು ನ್ಯಾಯವಾದಿ ರವೀಂದ್ರ ತೋಟಿಗೇರ ಹಾಗೂ ಶ್ರೀಮತಿ ಮಂಗಲಾ ಮೆಟಗುಡ್ ಅವರ ನಡುವೆ ಮಾತ್ರ. ಆದರೆ ಶ್ರೀ ರವೀಂದ್ರಅವರು 16000 ಮತದಾರರನ್ನು ತಲುಪುವದು, ಓಡಾಟ ಹಾಗೂ ಸಂಪರ್ಕ ಸಾಧಿಸಲು ಅಪಾರ ಪ್ರಮಾಣದಲ್ಲಿ ಹಣತೊಡಗಿಸುವದು ಕಷ್ಟವಾಗಬಹುದು. ಶ್ರೀಮತಿ ಮಂಗಲಾ ಮೆಟಗುಡ್ ಅವರು ಆಯ್ಕೆಯಾದರೆ ಅವರು ತಮ್ಮ ಕಾರ್ಯಶೈಲಿ ಹಾಗೂ ಚಿಂತನಾಶೈಲಿ ಬದಲಾಯಿಸಿಕೊಳ್ಳಬೇಕು. ಹಿರಿಯ ಸಾಹಿತಿಗಳನ್ನು ಗೌರವಿಸುವ ಹಾಗೂ ಸಲಹೆ ಪಡೆದುಕೊಳ್ಳುವ ಕೆಲಸ ಮಾಡಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಅವರು ಕೆಲಸ ಮಾಡಿದರೆ ಅವರಿಗೂ ಹಿತ ಸಾಹಿತ್ಯ ಪರಿಷತ್ತಿಗೂ ಕ್ಷೇಮ.
ಇನ್ನು ಮತದಾನದ ಪ್ರಮಾಣ ಪ್ರತಿಶತ 50 ಕ್ಕಿಂತ ಹೆಚ್ಚು ಯಾವಾಗಲೂದಾಟಿಲ್ಲ. ಈಗ ಅಂದಾಜು 16000 ಮತದಾರರಿದ್ದಾರೆ. 8000 ಜನರೂ ಮತದಾನ ಮಾಡಲಿಕ್ಕಿಲ್ಲ. ಹೀಗಾಗಿ 8000 ಜನ ಮತದಾನ ಮಾಡಿದ ಪಕ್ಷದಲ್ಲಿ 4000 ಕ್ಕಿಂತ ಅಧಿಕ ಮತ ಪಡೆಯುವವರು ಗೆಲ್ಲಬಲ್ಲರು. ಬೆಳಗಾವಿ ತಾಲ್ಲೂಕಿನ ಹಿರಿಯ ಮತದಾರರಲ್ಲಿ ಬಹಳಷ್ಟು ಜನ ನಿಧನರಾಗಿದ್ದಾರೆ. ಆದರೆ ಮತದಾರಯಾದಿಯಲ್ಲಿ ಉಳಿದಿದ್ದಾರೆ.
ಈ ಹಿಂದೆ - ಬೆಳಗಾವಿಯವರು, ಚಿಕ್ಕೋಡಿಯವರು, ಬೈಲಹೊಂಗಲದವರು, ಸವದತ್ತಿಯವರು ಜಿಲಾ ್ಲಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈವರೆಗೆ ಜಾತಿಆಧಾರದ ಮೇಲೆ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಆದರೆ ಪ್ರತಿಸಲ ನಾಗನೂರು ಶ್ರೀಮಠದ ಆಶೀವರ್ಾದ ಹಾಗೂ ಕೆ.ಎಲ್.ಇ. ಸಂಸ್ಥೆಯ ಬೆಂಬಲ ಪಡೆದವರೇ ಅಧ್ಯಕ್ಷರಾಗಿದ್ದಾರೆ. ಕಾರಣ ಕ.ಸಾ.ಪ. ಇತಿಹಾಸದಲ್ಲಿ ಅಖಂಡ ಕನರ್ಾಟಕಕ್ಕಾಗಿ ಶ್ರಮಿಸಿದ ನಾಗನೂರುರು ದ್ರಾಕ್ಷಿಮಠದ ಲಿಂ|| ಡಾ. ಶಿವಬಸವ ಸ್ವಾಮಿಗಳು ಮತ್ತು ಕೆ.ಎಲ್.ಇ. ಸಂಸ್ಥೆಯಕನ್ನಡ ಮುಖಂಡರು ಮುಂಚೂಣಿಯಲ್ಲಿದ್ದು ಈ ವರೆಗೆಜರುಗಿದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಲುತನು ಮನ ಧನದಿಂದ ನೆರವಾಗಿ- ಕನ್ನಡ ಉಳಿಸಲು ಪ್ರಧಾನ ಕಾರಣವೆನಿಸಿದ್ದಾರೆ. ಹೀಗಾಗಿ ಈ ಸಂಸ್ಥೆಗಳಲ್ಲಿದ್ದು ಮತದಾರರಾಗಿ ಕ.ಸಾ.ಪ. ಚಟುವಟಿಕೆಗಳಲ್ಲಿ ಮುಂದಾಗಿರುವವರೇ ನಿಣರ್ಾಯ ಕರೆನಿಸಿದ್ದಾರೆ.