ನೇಸರಗಿಯಲ್ಲಿ ಸಂಭ್ರಮದ ಹೊಳಿ ಹುಣ್ಣಿಮೆ ಆಚರಣೆ

A Holi festival celebration in Nesaragi

ನೇಸರಗಿ 15: ಇಲ್ಲಿನ ಶ್ರೀ ಮಾರುತಿ ದೇವಸ್ಥಾನ ಹಾಗೂ ಕಾಜಗಾರ ಗಲ್ಲಿಯ ಪುಟ್ಟ ಪುಟ್ಟ ಮಕ್ಕಳು ಬೆಳಿಗ್ಗೆಯಿಂದಲೆ ಬಣ್ಣ ಹಾಗೂ ನೀರು ಬಣ್ಣವನ್ನು ಪರಸ್ಪರ ಎರಚುತ್ತ, ದಾರಿಯಲ್ಲಿ ಹೋಗುವ ಜನರಿಗೆ, ಗಲ್ಲಿಯ ಮಹಿಳೆಯರಿಗೆ ರಂಗು ರಂಗಿನ ಬಣ್ಣಗಳನ್ನು ಎರಚುವ ಮುಖಾಂತರ ಪವಿತ್ರ ಹೊಳಿ ಹಬ್ಬವನ್ನು ಆಚರಿಸಲಾಯಿತು.  

ಸಂಜೆ ಕಾಮಣ್ಣನನ್ನು ಮೆರವಣಿಗೆ ಮಾಡಿ ಕರ್ನಾಟಕ ಚೌಕ ಹತ್ತಿರ ಇಡಲಾಗುತ್ತಿದ್ದು ಸಂಜೆ ಎಲ್ಲರೂ ಪೂಜೆ, ಎಡೆ, ಪ್ರಸಾದ ನೀಡುವದರ ಮೂಲಕ ಮರುದಿನ ಶುಕ್ರವಾರ  ಬೆಳಿಗ್ಗೆಯಿಂದ ಮದ್ಯಾಹ್ನ 12ರ ವರೆಗೆ ಬಣ್ಣ ಆಡಿ ಕಾಮದಹನ ಮಾಡಿ, ಆ ದಹನವಾದ ಬೆಂಕಿಯನ್ನು ಮನೆಗೆ ತಂದು ಕಡಲೆ, ಶೇಂಗಾ ಬೇಯಿಸಿ ತಿಂದು ಸ್ನಾನ ಮಾಡಿ, ಹೊಳಿಗೆ ಪ್ರಸಾದ ಮಾಡಿ ಎಲ್ಲ ದೇವರಿಗೆ ಪ್ರಸಾದ ಮಾಡಿ  ಸಿಹಿ ಊಟವನ್ನು ಸವಿದು ಗ್ರಾಮಸ್ಥರು ಹೊಳಿ ಆಚರಿಸಿದರು.