ಲೋಕದರ್ಶನ ವರದಿ
ಬಸವನಬಾಗೇವಾಡಿ 03: ಓರ್ವ ಮಹಿಳೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಪುರುಷನಂತೆ ತಾನೂ ಕೃಷಿ ಚಟುವಟಿಕೆ ಮಾಡಬೇಕೆಂದು ಎತ್ತುಗಳ ಸಹಾಯದ ಮುಖಾಂತರ ಕೇವಲ 7 ಗಂಟೆಯಲ್ಲಿ 16 ಎಕರೆ ಜಮೀನವನ್ನು ಹರಗಿ ಗೀತಾ ಮಾದರ ಎಂಬ ಮಹಿಳೆಯು ದಿಟ್ಟತನ ಮೆರೆದಿದ್ದಾಳೆ.
ತಾಲೂಕಿನ ನಂದಿಹಾಳ ಪಿಯು ಗ್ರಾಮದ ಗೀತಾ ರಮೇಶ ಮಾದರ ಎಂಬ ರೈತ ಮಹಿಳೆಯು ಪುರುಷನಂತೆ ಜಮೀನವನ್ನು ಹರಗಿ ಸಾಧನೆ ಮಾಡಿದ್ದಾಳೆ, ಭಾನುವಾರ ಬಾಳಪ್ಪ ಕುಮಸಿ ಎಂಬುವರಿಗೆ ಸೇರಿದ ಜಮೀನದಲ್ಲಿ ಬೆಳಗ್ಗೆ 8 ಗಂಟೆಗೆ ಜಮೀನವನ್ನು ಹರಗಲು ಆರಂಭಿಸಿದ ಮಹಿಳೆ ಮಧ್ಯಾಹ್ನ 3 ಗಂಟೆವರೆಗೆ ಸತತ 7 ಗಂಟೆಗಳ ಕಾಲ ಹರಗಿ ಭೇಷಎಣಿಸಿಕೊಂಡಿದ್ದಾಳೆ, ಬಾಳಪ್ಪ ಕುಮಸಿ ಎಂಬುವರಿಗೆ ಸೇರಿದ ಜಮೀನವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಲಿನಲ್ಲಿ ಉಳಿಮೆ ಮಾಡುತ್ತಿದ್ದಾರೆ.
ಪುರುಷರು ಗಳೆ ಹೊಡೆಯುವ ಇಲ್ಲವೆ ಕೃಷಿ ಚಟುವಟಿಕೆಯಲ್ಲಿ ಸಾಧನೆ ಮಾಡುವ ಕುರಿತಾಗಿ ತಿಳಿದುಕೊಂಡ ಗೀತಾ ಮಾದರ ಅವರು ಈ ವಿಚಾರವನ್ನು ಗಂಡನೊಂದಿಗೆ ಚಚರ್ಿಸಿದಾಗ ಸುಸ್ತಾಗುತ್ತದೆ ಬೇಡ ಎಂದರೂ ನಾನು ಸಾಧಿಸುತ್ತೇನೆ ಎಂದು ಮಹಿಳೆ ಪಟ್ಟು ಹಿಡಿದಾಗ ಪತಿ ಸೇರಿದಂತೆ ಇತರ ಸಮ್ಮತಿಯೊಂದಿಗೆ ಜಮೀನ ಹರಗುವ ಕಾರ್ಯಕ್ಕೆ ಮುಂದಾಗಿ ಸಾಧನೆ ಮಾಡಲು ಮುಂದಾಗಿ 7ಗಂಟೆಯಲ್ಲಿ 16ಎಕರೆ ಜಮೀನ ಹರಗಿ (ಗಳೆ ಹೊಡೆದು) ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಜಮೀನ ಹರಗುವ ಕುರಿತಾಗಿ ಸುದ್ದಿ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಜಮೀನಕ್ಕೆ ಆಗಮಿಸಿ ಗೀತಾ ಮಾದರ ಹರಗುವ ಕಾರ್ಯವನ್ನು ನೋಡಿ ಆಶ್ಚರ್ಯಚಕಿತರಾಗಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ, ಹರಗುವ ಕಾರ್ಯವೂ ಮುಗಿಯುತ್ತಿದ್ದಂತೆ ಗೀತಾ ಹಾಗೂ ರಮೇಶ ದಂಪತಿಗೆ ಗ್ರಾಮಸ್ಥರು ಸನ್ಮಾನಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ-ವಾದ್ಯವೈಭವಗಳೊಂದಿಗೆ ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಬಾಳಪ್ಪ ಕುಮಸಿ, ಮುದಕಪ್ಪ ಕೋಳೂರ, ಮುದಕಪ್ಪ ಬೆಂಕಿ, ಶಿವಲಿಂಗ ಪೂಜಾರಿ, ಸಿದ್ರಾಮ ಮಾದರ, ಸಂಗಮೇಶ ಮಾದರ, ಸಾಯಬಣ್ಣ ಮಾದರ, ಯಲ್ಲಪ್ಪ ಮಾದರ, ಖಾಜೇಸಾಬ ಬಾಗಲಕೋಟ, ಮಾಳಪ್ಪ ಜ್ಯೋತಿ, ಬಸವರಾಜ ಜೋಗಿ, ಬಸಪ್ಪ ಹಳ್ಳೂರ, ಶರಣಪ್ಪ ಬೆಂಕಿ, ಶಿವಪ್ಪ ಹುಗ್ಗಿ, ಕಾಂತಪ್ಪ ಕರಡಿ, ರಾಮಜೀ ಕುಮಸಿ, ರಮೇಶ ಮಾದರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.