ಬೆಂಗಳೂರು, ಮೇ 24,ರಾಜ್ಯದಲ್ಲಿ ಹೊಸದಾಗಿ 96 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೇರಿಕೆಯಾಗಿವೆ.ಚಿಕ್ಕಬಳ್ಳಾಪುರದಲ್ಲಿ 26, ಹಾಸನ 14, ಉಡುಪಿ 18, ದಾವಣಗೆರೆ4, ಗುಲ್ಬರ್ಗಾ 6, ಮಂಡ್ಯ 15, ತುಮಕೂರು 2, ಕೊಡಗಿನಲ್ಲಿ 1, ಉತ್ತರಕನ್ನಡದಲ್ಲಿ 2, ವಿಜಯಪುರ 1, ಯಾದಗಿರಿ 6, ಕಲಬುರಗಿಯಲ್ಲಿ 6 ಪ್ರಕರಣಗಳು ವರದಿಯಾಗಿವೆ.ಇವರಲ್ಲಿ ಬಹುತೇಕರು ಹೊರರಾಜ್ಯಗಳಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದಾರೆ.ರಾಜ್ಯದಲ್ಲಿ ಒಟ್ಟು 1378 ಸಕ್ರಿಯ ಪ್ರಕರಣಗಳಿದ್ದು, 634 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 42 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.