ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ

ಸಾಂಟಿಯಾಗೋ, ಮೇ 29, ಚಿಲಿಯಲ್ಲಿ ಒಟ್ಟು 86,943 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು 890 ಜನರು ಮೃತಪಟ್ಟಿದ್ದಾರೆ.ಬುಧವಾರ ರಾತ್ರಿಯ ವೇಳೆಗೆ ಮತ್ತೆ 4,654 ಹೊಸ ಪ್ರಕರಣಗಳು ದೃಢಪಟ್ಟಿದ್ದು 49 ಜನರು ಸೋಂಕಿನಿಂದ ಸಾವನ್ನಪ್ಪಿದ್ದು ಇದು ಚಿಲಿಯಲ್ಲಿ ಸೋಂಕು ಕಾಣಿಸಿಕೊಂಡ ನಂತರದ ಒಂದೇ ದಿನದ ಅತಿ ಹೆಚ್ಚಿನ ಪ್ರಕರಣವಾಗಿದೆ ಎಂದು ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ.ಈವರೆಗೆ 36,150 ಜನರು ಗುಣಮುಖರಾಗಿದ್ದು 3,707 ಆರೋಗ್ಯ ಸೇವಾ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಜೈಮೆ ಮನಾಲಿಚ್ ಹೇಳಿದ್ದಾರೆ.ಸಮಾಜದಲ್ಲಿ ಒಟ್ಟಾಗಿ ಒಂದೆಡೆ ಸೇರಿ ಪರಸ್ಪರ ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ನಿರ್ಲಕ್ಷಿಸಿದರೆ ಸೋಂಕಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರಾಜಧಾನಿ ಸ್ಯಾಂಟಿಗೋ ಮತ್ತು ಮೆಟ್ರೋಪಾಲಿಟನ್ ನಗರಗಳಲ್ಲಿ ಮೇ 29 ರಂದು ಕೊನೊಗೊಳ್ಳಬೇಕಿದ್ದ ಲಾಕ್ ಡೌನ್ ಅನ್ನು ಅನಿರ್ದಿಷ್ಟಾವಧಿ ವಿಸ್ತರಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಕೆಲವೆಡೆ ನಿರ್ಬಂಧ ಸಡಿಲಿಸಲಾಗಿದ್ದು ಇನ್ನು ಕೆಲವೆಡೆ ಇನ್ನು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.