ಇಂದು ಅಂಜನಾದ್ರಿ ಬೆಟ್ಟಕ್ಕೆ 80 ಹನುಮ ಮಾಲಾಧಾರಿಗಳ ಪ್ರಯಾಣ
ಯಮಕನಮರಡಿ 11: ಯಮಕನಮರಡಿಯಿಂದ ಅಂಜನಾದ್ರಿ ಬೆಟ್ಟಕ್ಕೆ 80 ಜನ ಹನುಮ ಮಾಲಾಧಾರಿಗಳು ಪ್ರಯಾಣ ಬೆಳೆಸಲಿದ್ದಾರೆ.
ದಿ. 11ರಂದು ಮುಂಜಾನೆ ಹೋಮ ಹವನ ಇತ್ಯಾದಿ ಕಾರ್ಯಕ್ರಮಗಳನ್ನು ಮುಗಿಸಿ ಹತ್ತರಗಿ ಸದ್ಗುರು ಹರಿ ಕಾಕಾ ಗೋಸಾವಿ ಋಗ್ವೇದಿ ಭಾಗವತ ವೈಷ್ಣವ ಶ್ರೀಮಠದ ಪೀಠಾಧೀಶರಾದ ಡಾಕ್ಟರ್ ಆನಂದ ಮಹಾರಾಜ್ ಗೋಸಾವಿಯವರು ಸುಮಾರು 80 ಜನ ಮಾಲಾಧಾರಿಗಳನ್ನು ಆಶೀರ್ವದಿಸಿ ಮಾಲಾರೆ್ಣ ಮಾಡಿದರು. ಸಂಜೆ ಶೋಭಾಯಾತ್ರೆ ಜರುಗಿತು.ದಿನಾಂಕ 12ರಂದು ಯಮುಕನಮರಡಿ ಗ್ರಾಮದಿಂದ ಪ್ರಯಾಣ ಬೆಳೆಸಲಿದ್ದು ಎಂದು ಹನುಮ ಮಾಲಾಧಾರಿ ಯುವಕ ಮಿತ್ರರು ತಿಳಿಸಿದ್ದಾರೆ.