ಮಾಸ್ಕೊ, ಮೇ 30,ರಷ್ಯಾದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಒಂದೇ ದಿನದಲ್ಲಿ 8,952 ದಾಖಲಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 3,96,575ಕ್ಕೆ ಏರಿದೆ. ದೇಶದ 83 ವಿಭಾಗಗಳಲ್ಲಿ 8,952 ಪ್ರಕರಣ ಪತ್ತೆಯಾಗಿವೆ. ಇನ್ನು 3,747 ಸೋಂಕು ಧನಾತ್ಮಕವಾಗಿದೆ. ಅಲ್ಲದೆ ಕೆಲವರಲ್ಲಿ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ. ಒಟ್ಟು 85 ಕಡೆಗಳಲ್ಲಿ 3,96,575 ಪ್ರಕರಣ ದೃಢಪಟ್ಟಿದೆ. ಮಾಸ್ಕೋದಲ್ಲಿ 2,367 ಪ್ರಕರಣ ಹಾಗೂ ಮಾಸ್ಕೋ ಪ್ರಾಂತ್ಯದಲ್ಲಿ 735, ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ 365 ಪ್ರಕರಣ ಪತ್ತೆಯಾಗಿವೆ. ಇದೇ ಅವಧಿಯಲ್ಲಿ ದೇಶದಲ್ಲಿ 181 ಸಾವು ಸಂಭವಿಸಿದ್ದು, ಒಟ್ಟು ಮೃತರ ಸಂಖ್ಯೆ 4,555ಕ್ಕೇರಿದೆ.