ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಸಂಪುಟ ಅನುಮೋದನೆ

ನವದೆಹಲಿ, ಸೆ 18    ಭಾರತೀಯ ರೈಲ್ವೆ ಯ  11 ಲಕ್ಷ  ಉದ್ಯೋಗಿಗಳಿಗೆ  ಸರ್ಕಾರ ಬುಧವಾರ  78 ದಿನಗಳ ಬೋನಸ್ ಪ್ರಕಟಿಸಿದೆ. ರೈಲ್ವೆ ಉತ್ಪಾದಕತೆಗಾಗಿ  ಉದ್ಯೋಗಿಗಳಿಗೆ  ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. 

ಸುದ್ದಿಗೋಷ್ಟಿಯಲ್ಲಿ ಈ ವಿಷಯ ಪ್ರಕಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ  ಪ್ರಕಾಶ್ ಜಾವಡ್ಕೇರ್,  ಸರ್ಕಾರದ ನಿರ್ಧಾರದಿಂದ ಖಜಾನೆಯ ಮೇಲೆ  2024 ಕೋಟಿ ರೂಪಾಯಿ ಹೊರೆಯಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಆರು ವರ್ಷಗಳಿಂದ ನಿರಂತರವಾಗಿ  ರೈಲ್ವೆ ನೌಕರರಿಗೆ ಬೋನಸ್ ನೀಡುತ್ತಿದೆ ಎಂದು ಹೇಳಿದರು. 

ರೈಲ್ವೆಯನ್ನು ದೇಶದ ಜೀವ ವಾಹಿನಿಯಾಗಿಸಲು  ರೈಲ್ವೆ ನೌಕರರು ನೀಡಿರುವ ಕೊಡುಗೆಯನ್ನು ಪರಿಗಣಿಸಿ  ಸರ್ಕಾರ ಬೋನಸ್ ಕಲ್ಪಿಸಿದೆ ಎಂದು ಸಚಿವರು ಹೇಳಿದರು. 

ಭಾರತೀಯ ರೆ?ಲ್ವೆ ಈ ಬಾರಿಯ ದಸರಾ ಹಬ್ಬಕ್ಕೆ ತನ್ನ ನೌಕರರಿಗೆ  ಭರಪೂರ ಬಂಪರ್ ನೀಡಿದೆ.  

78 ದಿನಗಳ 18 ಸಾವಿರ ರೂ. ಬೋನಸ್ ವೇತನವನ್ನು ನೀಡಲಾಗುತ್ತಿದ್ದು ಕಳೆದ 6 ವರ್ಷದಿಂದ ಈ ರೀತಿಯ ಕೊಡುಗೆ ನೀಡಲಾಗುತ್ತದೆ. ರೆ?ಲ್ವೆ ಸಂಘಟನೆಗಳೊಂದಿಗೆ  ಮಂಡಳಿ ಮಾತುಕತೆ ನಡೆಸಿದ ನಂತರ ಲಾಭದಾಯಕ ಉತ್ಪನ್ನವನ್ನು ಒಳಗೊಂಡ ಬೋನಸ್ ನೀಡಲು ಕೇಂದ್ರ ಸಂಪುಟ ಸಮ್ಮತಿಸಿದೆ  

 ಒಟ್ಟು 11 ಲಕ್ಷ ರೆ?ಲ್ವೆ ಉದ್ಯೋಗಿಗಳು ಕಳೆದ 6 ವರ್ಷಗಳಿಂದ ದಸರಾ ಹಬ್ಬದ ಸಂದರ್ಭದಲ್ಲಿ  ಬೋನಸ್ ಪಡೆದುಕೊಳ್ಳುತ್ತಿದ್ದಾರೆ.  

ಕಳೆದ ವರ್ಷ ಭಾರತೀಯ ರೆ?ಲ್ವೆಯು 16 ಸಾವಿರ ಕೋಟಿ ರೂ. ಆದಾಯಗಳಿಸಿದ್ದು 1161 ,ಮಿಲಿಯನ್ ಟನ್ ದಾಖಲೆಯ ಸರಕು ಸಾಗಣೆಯನ್ನು ಸಾಗಿಸಿದೆ.. ಈ ಆಧಾರದ ಮೇಲೆ ರೆ?ಲ್ವೆ ಸಂಘಟನೆಗಳು 80 ದಿನಗಳ ಬೋನಸ್ ನೀಡಬೇಕೆಂದು ಆಗ್ರಹಿಸಿದ್ದವು. ಅಂತಿಮವಾಗಿ 78 ದಿನದ ಬೋನಸ್ ನೀಡಲು ಮಂಡಳಿಯು ಒಪ್ಪಿಕೊಂಡಿತು. ಇದರಿಂದ ಇಲಾಖೆಗೆ ಒಟ್ಟು 2 ಸಾವಿರ ಕೋಟಿ ರೂ. ಹಣ ವೆಚ್ಚವಾಗಲಿದೆ ಎನ್ನಲಾಗಿದೆ.