ಮಾಸ್ಕೋ, ಏ 7,ಜಗತ್ತಿನಾದ್ಯಂತ ಕಳೆದೊಂದು ದಿನ 77200 ಹೊಸೊ ಕೊರೊನಾ ಸೋಂಕು ಪ್ರಕರಣಗಳು ಮತ್ತು 4810 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್ಒ ತಿಳಿಸಿದೆ ಒಟ್ಟು ಪ್ರಪಂಚದಾದ್ಯಂತ 12 ಲಕ್ಷ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಈ ಸೋಂಕಿಗೆ ಬಲಿಯಾದವರ ಸಂಖ್ಯೆ 67500 ಕ್ಕೆ ಏರಿಕೆಯಾಗಿದೆ ಎಂದು ಡಬ್ಲ್ಯುಎಚ್ಒ ನ ಸೋಮವಾರದ ಅಂಕಿ ಅಂಶ ತಿಳಿಸಿದೆ, ಅತಿ ಹೆಚ್ಚು ಪ್ರಕರಣಗಳು ಯೂರೋಪ್ ನಿಂದ ವರದಿಯಾಗಿದೆ. 6,55,000 ಜನರಲ್ಲಿ ಸೋಂಕು ದೃಢಪಟ್ಟಿದೆ. ಯೂರೋಪ್ ನಲ್ಲಿ ಕಳೆದ 24 ಗಂಟೆಗಳಲ್ಲಿ 3063 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 1493 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು ಒಟ್ಟು ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 67594 ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮಾರ್ಚ್ 11 ರಂದು ಕೋವಿಡ್ 19 ಅನ್ನು ಸಾಂಕ್ರಾಮಿಕ ಎಂದು ಡಬ್ಲ್ಯು ಎಚ್ ಒ ಘೋಷಿಸಿತ್ತು.