ಬೆಂಗಳೂರು, ಮೇ 28, ರಾಜ್ಯದಲ್ಲಿ ಹೊಸದಾಗಿ 75 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2493ಕ್ಕೇರಿಕೆಯಾಗಿದೆ. ಉಡುಪಿಯಲ್ಲಿ 29, ಹಾಸನದಲ್ಲಿ 13 ಹಾಗೂ ಬೆಂಗಳೂರಿನಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ 2, ಕಲಬುರಗಿಯಲ್ಲಿ 3, ರಾಯಚೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 6, ಚಿಕ್ಕಮಗಳೂರಿನಲ್ಲಿ 3, ಚಿತ್ರದುರ್ಗದಲ್ಲಿ 6, ಯಾದಗಿರಿಯಲ್ಲಿ 7 ಪ್ರಕರಣಗಳು ವರದಿಯಾಗಿವೆ.ಇವರಲ್ಲಿ ದೆಹಲಿ ಹಾಗೂ ಮುಂಬೈ ಆಗಮಿಸಿದ ಸೋಂಕಿತರು ಹೆಚ್ಚಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 49 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 809 ಮಂದಿ ಗುಣಮುಖರಾಗಿದ್ದು, 1635 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.