ಬೀಜಿಂಗ್ ನಲ್ಲಿ 7 ಹೊಸ ದೇಶಿಯ ಕರೋನಸೋಂಕು ಪ್ರಕರಣ ದಾಖಲು

ಬೀಜಿಂಗ್, ಜೂನ್ 30:  ಬೀಜಿಂಗ್ ನಲ್ಲಿ ದೇಶೀಯವಾಗಿ ಹರಡಿದ ಏಳು ಹೊಸ ಕರೋನ  ದೃಡ  ಪ್ರಕರಣಗಳು ಮತ್ತು ಒಂದು ಲಕ್ಷಣರಹಿತ ಪ್ರಕರಣ  ಸೋಮವಾರ ವರದಿಯಾಗಿದೆ  ಎಂದು ಪುರಸಭೆಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.ಈ ಅವಧಿಯಲ್ಲಿ ಹೊಸ ಶಂಕಿತ ಪ್ರಕರಣಗಳು ದಾಖಲಾಗಿಲ್ಲ ಮತ್ತು ಸೋಮವಾರ ಚೇತರಿಸಿಕೊಂಡ ನಂತರ ಒಬ್ಬ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಯೋಗ ದೈನಂದಿನ ವರದಿಯಲ್ಲಿ ತಿಳಿಸಿದೆ.ಜೂನ್ 11 ರಿಂದ 29 ರವರೆಗೆ, ಬೀಜಿಂಗ್ನಲ್ಲಿ   ಸ್ಥಳೀಯವಾಗಿ ಹರಡಿದ 325 ಪ್ರಕರಣಗಳು ವರದಿಯಾಗಿದೆ.  ಅವರಲ್ಲಿ 324 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ವೀಕ್ಷಣೆಯಲ್ಲಿ 27 ಲಕ್ಷಣರಹಿತ ಪ್ರಕರಣಗಳಿವೆ ಎಂದೂ  ಆಯೋಗ ತಿಳಿಸಿದೆ.