ದೇಶೀಯ ವಿಮಾನದಲ್ಲಿ ಆಗಮಿಸುತ್ತಿರುವವರಿಗೆ 7 ದಿನ ಕ್ವಾರಂಟೈನ್ ಕಡ್ಡಾಯ: ಪ್ರವೀಣ್ ಸೂದ್

ಬೆಂಗಳೂರು,  ಮೇ 23, ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಿ ಕರ್ನಾಟಕ ರಾಜ್ಯಕ್ಕೆ   ಆಗಮಿಸುವವರನ್ನು ಕಡ್ಡಾಯವಾಗಿ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ  ನಂತರ ಮನೆಯಲ್ಲಿ ಕ್ವಾರಂಟೈನ್‌‌ಗೆ ಒಳಪಡಿಸಲು ರಾಜ್ಯ ಪೊಲೀಸ್ ಮಹಾ  ನಿರ್ದೇಶಕರು (ಡಿಜಿಪಿ) ಆದೇಶ ಹೊರಡಿಸಿದ್ದಾರೆ.ಕೊರೊನಾ ಸೋಂಕು ಹೆಚ್ಚಿರುವ  ರಾಜ್ಯಗಳಿಂದ ವಾಪಸ್ಸಾಗುತ್ತಿರುವ ಪ್ರಯಾಣಿಕರಿಗೆ ಮಾತ್ರ ಈ ಆದೇಶ ಅನ್ವಯಸಲಿದ್ದು, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್, ತಮಿಳುನಾಡು, ದೆಹಲಿ ಮತ್ತು ಮಧ್ಯಪ್ರದೇಶ ದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.